Back
ಆಗಾಗ ಕೇಳಲಾದ ಪ್ರಶ್ನೆಗಳು (ಎಫ್‌ಎಕ್ಯೂ)- ಸಂಸತ್ತು

ಉತ್ತರ: ಭಾರತದ ಸಂವಿಧಾನದ 79ನೇ ಅನುಚ್ಛೇಧದ ಪ್ರಕಾರ ಸಂಸತ್ತು ಭಾರತದ ರಾಷ್ಟ್ರಪತಿ ಮತ್ತು ಸಂಸತ್ತಿನ ಎರಡು ಸದನಗಳಾದ ರಾಜ್ಯಸಭೆ ಮತ್ತು ಲೋಕಸಭೆಯನ್ನು ಒಳಗೊಂಡಿದೆ.

ಉತ್ತರ: ಭಾರತದ ರಾಷ್ಟ್ರಪತಿಯನ್ನು ಸಂಸತ್ತಿನ ಎರಡೂ ಸದನಗಳ ಚುನಾಯಿತ ಸದಸ್ಯರು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪುದುಚೇರಿಯ ವಿಧಾನಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡ ಮತದಾರರು ಆಯ್ಕೆ ಮಾಡುತ್ತಾರೆ.

ಉತ್ತರ: ಸಂವಿಧಾನದ 55ನೇ ಅನುಚ್ಛೇಧದ ಪ್ರಕಾರ, ರಾಷ್ಟ್ರಪತಿ ಚುನಾವಣೆಯಲ್ಲಿ ನಾನಾ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣದಲ್ಲಿ ಏಕರೂಪತೆ ಇರಬೇಕು. ರಾಜ್ಯಗಳ ನಡುವೆ ಇಂತಹ ಏಕರೂಪತೆಯನ್ನು ಪಡೆಯುವ ಉದ್ದೇಶದಿಂದ ಪ್ರತಿ ರಾಜ್ಯದ ಮತಗಳ ಸಂಖ್ಯೆಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ನಿರ್ಧರಿಸಲಾಗುತ್ತದೆ:

(ಎ) ರಾಜ್ಗದ ಜನಸಂಖ್ಯೆಯನ್ನು ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆಯಿಂದ ವಿಭಾಗಿಸುವುದರ ಮೂಲಕ ಲಭ್ಯವಾಗುವ ಭಾಗಲಬ್ಧದಲ್ಲಿ ಒಂದು ಸಾವಿರವನ್ನು ಗುಣಿಸಿದರೆ ಪಡೆಯುವಷ್ಟು ಸಂಖ್ಯೆಯ ಮತಗಳನ್ನು ಒಂದು ರಾಜ್ಯ ವಿಧಾನಸಭೆಯ ಪ್ರತಿ ಚುನಾಯಿತ ಸದಸ್ಯರು ಹೊಂದಿರುತ್ತಾರೆ;

(ಬಿ) If after taking the said multiples of one thousand, the remainder is not less than five hundred, then the vote of each member shall be further increased by one;

 

(c) each elected member of either House of Parliament shall have such number of votes as may be obtained by dividing the total number of votes assigned to the members of the State Legislation Assemblies by the total number of elected members of both the House of Parliament fractions exceeding one-half being counted as one and & other fractions being disregarded.

 

The election of the President shall be held in accordance with the system of proportional representation by means of the single transferable vote and the voting shall be by secret ballot.

ಉತ್ತರ: ರಾಷ್ಟ್ರಪತಿಯವರು ತಮ್ಮ ಹುದ್ದೆಯನ್ನು ಅಲಂಕರಿಸಿದ ದಿನಾಂಕದಿಂದ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತಾರೆ.

ಉತ್ತರ: ಹೌದು.  

ಅಂತಹ ಎರಡು ಪರಿಸ್ಥಿತಿಗಳಿರುತ್ತವೆ. ಮೊದಲನೆಯದಾಗಿ ರಾಷ್ಟ್ರಪತಿಯವರು ಲಿಖಿತವಾಗಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದಾಗ ಮತ್ತು ಎರಡನೆಯದಾಗಿ ಸಂವಿಧಾನವನ್ನು ಉಲ್ಲಂಘಿಸಿದ್ದಕ್ಕಾಗಿ ದೋಷಾರೋಪಣೆ ಮೂಲಕ ರಾಷ್ಟ್ರಪತಿ ಅವರನ್ನು ಹುದ್ದೆಯಿಂದ ತೆಗೆದುಹಾಕಿದಾಗ.

ಉತ್ತರ: ಸಂವಿಧಾನದ 61ನೇ ಅನುಚ್ಛೇಧದ ಪ್ರಕಾರ, ರಾಷ್ಟ್ರಪತಿ ಅವರನ್ನು ಸಂವಿಧಾನದ ಉಲ್ಲಂಘನೆಗಾಗಿ ದೋಷಾರೋಪಕ್ಕೆ ಗುರಿಪಡಿಸಿದಾಗ ಅಂತಹ ಆರೋಪವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆ ಮಾಡಬೇಕು. ಈ ಕೆಳಗಿನ ಸಂಗತಿಗಳು ಅಲ್ಲದೇ ಇದ್ದರೆ ಅಂತಹ ಆರೋಪವನ್ನು ಶಿಫಾರಸು ಮಾಡುವಂತಿಲ್ಲ; (ಎ) ಅಂತಹ ಒಂದು ಆರೋಪದ ಪಸ್ತಾಪಕ್ಕೆ ಸಂಬಂಧಿಸಿದ ನಿರ್ಣಯವನ್ನು ಕನಿಷ್ಠ 14 ದಿನಗಳ ನೋಟಿಸ್ ಬಳಿಕ ಮಂಡಿಸಬೇಕು ಮತ್ತು ಸದನದ ಒಟ್ಟು ಸದಸ್ಯರ ಪೈಕಿ ನಾಲ್ಕನೇ ಒಂದರಷ್ಟು ಕಡಿಮೆ ಇಲ್ಲದಷ್ಟು ಸದಸ್ಯರು ನಿರ್ಣಯವನ್ನು ಮಂಡಿಸುವ ತಮ್ಮ ಉದ್ದೇಶವನ್ನು ತಿಳಿಸಬೇಕು, ಮತ್ತು (ಬಿ) ಇಂತಹುದೊಂದು ನಿರ್ಣಯವನ್ನು ಸದನದ ಒಟ್ಟು ಸದಸ್ಯರ 3ನೇ ಎರಡರಷ್ಟು ಕಡಿಮೆ ಬಹುಮತವಿಲ್ಲದಂತೆ ಅಂಗೀಕರಿಸಬೇಕು.

ಉತ್ತರ: ಹೌದು.

ಸಂವಿಧಾನದ 57ನೇ ಅನುಚ್ಛೇಧದ ಪ್ರಕಾರ ರಾಷ್ಟ್ರಪತಿಯವರು ತಮ್ಮ ಹುದ್ದೆಯ ಮರು ಚುನಾವಣೆಗೆ ಅರ್ಹರು.

ಉತ್ತರ: ಸಂವಿಧಾನದ 38ನೇ ಅನುಚ್ಛೇಧದರ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಭಾರತದ ಪ್ರಜೆ ಅಲ್ಲದೇ ಹೋದರೆ ಆತ/ಆಕೆ ಚುನಾವಣೆಗೆ ಅರ್ಹರಾಗಿರುವುದಿಲ್ಲ ಮತ್ತು 35 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಹಾಗೂ ಜನಪ್ರತಿನಿಧಿ ಸದನದ ಸದಸ್ಯನಾಗಿ/ಳಾಗಿ ಚುನಾಯಿತರಾಗಲು ಅರ್ಹತೆಯನ್ನು ಹೊಂದಿರಬೇಕು. ಭಾರತ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಅಡಿಯಲ್ಲಿ ಅಥವಾ ಅಂತಹ ಸರ್ಕಾರದ ಯಾವುದೇ ರೀತಿಯ ನಿಯಂತ್ರಣದಲ್ಲಿ ಇರುವ ಸ್ಥಳೀಯ ಅಥವಾ ಇನ್ನಿತರ ಪ್ರಾಧಿಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಆ ವ್ಯಕ್ತಿ ಅರ್ಹನಾಗುವುದಿಲ್ಲ.

ಉತ್ತರ: ರಾಷ್ಟ್ರಪತಿಯು ಸಂಸತ್ತಿನ ಯಾವುದೇ ಸದನದ ಅಥವಾ ಯಾವುದೇ ರಾಜ್ಯದ ಶಾಸನಸಭೆಯ ಸದನದ ಸದಸ್ಯರಾಗಿರುವಂತಿಲ್ಲ. ಇಂತಹ ಯಾವುದೇ ಒಬ್ಬ ಸದಸ್ಯ  ರಾಷ್ಟ್ರಪತಿಯಾಗಿ ಆಯ್ಕೆಯಾದರೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವ ದಿನಾಂಕದ ಹೊತ್ತಿಗೆ ಆ ಸದನದಲ್ಲಿನ ಸ್ಥಾನವನ್ನು ತ್ಯಜಿಸಬೇಕು.

ಉತ್ತರ: ಸಂಸತ್ತಿನ ಎರಡೂ ಸದನದ ಸದಸ್ಯರನ್ನು ಒಳಗೊಂಡಿರುವ ಚುನಾಯಿತ ಸದಸ್ಯರು ಉಪ-ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ.

ಉತ್ತರ: ಒಂದು ಮತದ ರೂಪದಲ್ಲಿ ಪ್ರಮಾನಾನುಗುಣ ಪ್ರಾತಿನಿದ್ಯದ ಪ್ರಕಾರವಾಗಿ ಚುನಾವಣೆಯು ನಡೆಯುತ್ತದೆ ಮತ್ತು ರಹಸ್ಯ ಮತದಾನದ ಮೂಲಕ ಮತದಾನ ನಡೆಯುತ್ತದೆ.

ಉತ್ತರ: ಹುದ್ದೆಯನ್ನು ಅಲಂಕರಿಸಿದ ದಿನಾಂಕದಿಂದ ಐದು ವರ್ಷಗಳ ತನಕ ಉಪ-ರಾಷ್ಟ್ರಪತಿ ಅಧಿಕಾರದಲ್ಲಿ ಇರುತ್ತಾರೆ.

 

ಉತ್ತರ: ಹೌದು

ಅಂತಹ ಎರಡು ಪರಿಸ್ಥಿತಿಗಳು ಇರುತ್ತವೆ. ಮೊದಲನೆಯದಾಗಿ ಉಪರಾಷ್ಟ್ರಪತಿಯು ಲಿಖಿತ ರೂಪದಲ್ಲಿ ರಾಷ್ಟ್ರಪತಿಗೆ ರಾಜೀನಾಮೆಯನ್ನು ಸಲ್ಲಿಸುವುದು ಮತ್ತು ಎರಡನೆಯದಾಗಿ ಅವರನ್ನು ಹುದ್ದೆಯಿಂದ ಕಿತ್ತುಹಾಕಿದಾಗ.

ಉತ್ತರ: ರಾಜ್ಯ ಸಭೆಯ ನಿರ್ಣಯದ ಮೂಲಕ ಉಪರಾಷ್ಟ್ರಪತಿಯವರನ್ನು ಹುದ್ದೆಯಿಂದ ವಜಾ ಮಾಡಬಹುದು. ಇದಕ್ಕೆ ರಾಜ್ಯಸಭೆಯ ಎಲ್ಲ ಸದಸ್ಯರ ಬಹುಮತದ ಅಗತ್ಯವಿರುತ್ತದೆ ಮತ್ತು ರಾಜ್ಯಸಭೆಯ ಒಪ್ಪಿಗೆ ಬೇಕಾಗುತ್ತದೆ. ಇಂತಹ ಒಂದು ನಿರ್ಣಯವನ್ನು ಮಂಡಿಸುವ ಉದ್ದೇಶದ ಬಗ್ಗೆ ಕನಿಷ್ಠ 14 ದಿನಗಳ ನೋಟಿಸ್ ನ್ನು ನೀಡದೇ ಇಂತಹ ನಿರ್ಣಯವನ್ನು ಮಂಡಿಸುವಂತಿಲ್ಲ.

ಉತ್ತರ: ಸಂವಿಧಾನದ 66ನೇ ಅನುಚ್ಛೇಧದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಭಾರತದ ಪ್ರಜೆ ಅಲ್ಲದೇ ಹೋದರೆ ಆತ/ಆಕೆ ಉಪರಾಷ್ಟ್ರಪತಿ ಚುನಾವಣೆಗೆ ಅರ್ಹರಾಗಿರುವುದಿಲ್ಲ ಮತ್ತು 35 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಹಾಗೂ ರಾಜ್ಯಸಭೆ ಸದಸ್ಯರಾಗಿ ಚುನಾಯಿತರಾಗಲು ಅರ್ಹತೆಯನ್ನು ಹೊಂದಿರಬೇಕು. ಸರ್ಕಾರದ ಯಾವುದೇ ರೀತಿಯ ನಿಯಂತ್ರಣದಲ್ಲಿಇರುವ ಸ್ಥಳೀಯ ಅಥವಾ ಇನ್ನಿತರ ಪ್ರಾಧಿಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಆ ವ್ಯಕ್ತಿ ಅರ್ಹನಾಗುವುದಿಲ್ಲ.

ಉತ್ತರ: ಹೌದು.

ಸಂವಿಧಾನದ 71ನೇ ಅನುಚ್ಛೇಧದ ಪ್ರಕಾರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಅಥವಾ ಅದರಿಂದ ಉಂಟಾದ ಎಲ್ಲ ಗೊಂದಲಗಳು ಮತ್ತು ವಿವಾದಗಳನ್ನು ವಿಚಾರಣೆಗೆ ಒಳಪಡಿಸಬೇಕು ಮತ್ತು ಅದನ್ನು ಸುಪ್ರೀಂ ಕೋರ್ಟ್ ನಿರ್ಧರಿಸುತ್ತದೆ. ಇದಲ್ಲದೆ, 1952ರ ರಾಷ್ಟ್ರಪತಿ ಮತ್ತು ಉಪ-ರಾಷ್ಟ್ರಪತಿ ಚುನಾವಣೆ ಕಾಯ್ದೆಯ 14ನೇ ಸೆಕ್ಸನ್ ಪ್ರಕಾರ ಸುಪ್ರೀಂ ಕೋರ್ಟ್ ಸಮ್ಮುಖದಲ್ಲಿ ಚುನಾವಣಾ ಮೇಲ್ಮನವಿಯನ್ನು ಸಲ್ಲಿಸಬಹುದು.

ಉತ್ತರ: 250.

ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ 250 ಇರಬಹುದು. ಭಾರತದ ಸಂವಿಧಾನದ 80ನೇ ಅನುಚ್ಛೇಧದ ಪ್ರಕಾರ 12 ಮಂದಿ ಸದಸ್ಯರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ ಮತ್ತು ಉಳಿದಂತೆ 238ಕ್ಕೆ ಮೀರದಂತೆ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ಪ್ರಮಾಣಾನುಗತ ಪ್ರಾತಿನಿಧ್ಯದ ವ್ಯವಸ್ಥೆಯ ಮೂಲಕ ವರ್ಗಾವಣೆ ಮಾಡಬಹುದಾದ ಏಕ ಮತದ ರೂಪದಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ.

ಉತ್ತರ: ಇಲ್ಲ.

ಅವರೆಲ್ಲರೂ ಚುನಾಯಿತ ಪ್ರತಿನಿಧಿಗಳಲ್ಲ. ಮೇಲೆ ಪ್ರಸ್ತಾಪ ಮಾಡಿದಂತೆ 12 ಮಂದಿ ನಾಮಕರಣ ಸದಸ್ಯರು ಮತ್ತು ಉಳಿದ 238 ಮಂದಿ ಚುನಾಯಿತ ಸದಸ್ಯರು.

ಉತ್ತರ: ರಾಜ್ಯಸಭೆಯು ಶಾಶ್ವತ ಸದನ. ಸಂವಿಧಾನದ 83(1)ನೇ ಅನುಚ್ಛೇಧದ ಪ್ರಕಾರ ಇದು ವಿಸರ್ಜನೆಗೆ ಒಳಪಡುವುದಿಲ್ಲ. ಆದರೆ, ಸರಿಸುಮಾರು ಪ್ರತಿ ಎರಡು ವರ್ಷಗಳಿಗೊಮ್ಮೆ ಇದರ ಸದಸ್ಯರು ನಿವೃತ್ತರಾಗಬೇಕು ಮತ್ತು ಅವರ ಸ್ಥಾನದಲ್ಲಿ ಅಷ್ಟೇ ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡಬೇಕು.

ಉತ್ತರ: ರಾಜ್ಯದ  ವಿಧಾನಸಭೆಗಳ ಚುನಾಯಿತ ಸದಸ್ಯರು.

ಭಾರತದ ಸಂವಿಧಾನದ 80(4)ನೇ ಅನುಚ್ಛೇದವು ಪ್ರಮಾಣಾನುಗತ ಪ್ರಾತಿನಿಧ್ಯದ ವ್ಯವಸ್ಥೆಯ ಮೂಲಕ ವರ್ಗಾವಣೆ ಮಾಡಬಹುದಾದ ಏಕ ಮತದ ರೂಪದಲ್ಲಿ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ರಾಜ್ಯ ಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ.

ಉತ್ತರ: ಭಾರತದ ರಾಷ್ಟ್ರಪತಿ.

ಈ ಹಿಂದೆ ಪ್ರಸ್ತಾಪ ಮಾಡಿದಂತೆ ರಾಜ್ಯ ಸಭೆಯ 12 ಮಂದಿ ಸದಸ್ಯರನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.

ಉತ್ತರ: ಹೌದು.

ಭಾರತದ ಸಂವಿಧಾನದ 80(3)ನೇ ಅನುಚ್ಛೇದದ ಪ್ರಕಾರ ರಾಜ್ಯ ಸಭೆಗೆ ರಾಷ್ಟ್ರಪತಿಗಳು ನೇಮಕ ಮಾಡುವ ಸದಸ್ಯರು ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆಯಂತಹ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಅಥವಾ ಅನುಭವವನ್ನು ಹೊಂದಿರಬೇಕು.

ಹೀಗೆ ನೇಮಕವಾಗುವ ವ್ಯಕ್ತಿಯು 30ಕ್ಕಿಂತ ಕಡಿಮೆ ವಯಸ್ಸಿನವರು ಆಗಿರಬಾರದು ಎಂದು ಅನುಚ್ಛೇದ 84 (ಬಿ) ನಿಗದಿಪಡಿಸುತ್ತದೆ.

 

ಉತ್ತರ: ಸಾಮಾನ್ಯ ಅವಧಿ 5 ವರ್ಷಗಳು

ಸಂವಿಧಾನದ 83(2)ನೇ ಅನುಚ್ಛೇದವು, ಲೋಕ ಸಭೆಯ ಸಾಮಾನ್ಯ ಅವಧಿಯು ಅದರ ಮೊದಲ ಸಭೆಯಿಂದ ಆರಂಭವಾದ ದಿನಾಂಕದಿಂದ ಐದು ವರ್ಷಗಳು ಮತ್ತು ಅದನ್ನು ಮೀರುವಂತಿಲ್ಲ ಎಂದು ನಿಗದಿಪಡಿಸಿದೆ. ಆದರೆ, ರಾಷ್ಟ್ರಪತಿ ಸದನವನ್ನು ಅದಕ್ಕೂ ಮೊದಲೇ ವಿಸರ್ಜನೆ ಮಾಡಬಹುದು.

ಉತ್ತರ: 550

ಲೋಕ ಸಭೆಯ ಚುನಾಯಿತ ಸದಸ್ಯರ ಗರಿಷ್ಟ ಸಂಖ್ಯೆ 550. ಸಂವಿಧಾನದ 81ನೇ ಅನುಚ್ಛೇದದ ಪ್ರಕಾರ ರಾಜ್ಯಗಳಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ 530 ಮತ್ತು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 20ಕ್ಕಿಂತ ಹೆಚ್ಚು ಸದಸ್ಯರು ಆಯ್ಕೆಯಾಗುವಂತಿಲ್ಲ. ಆಂಗ್ಲೋ ಇಂಡಿಯನ್ ಸಮುದಾಯದವರಿಗೆ ಸದನದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬುದು ಮನವರಿಕೆಯಾದರೆ ರಾಷ್ಟ್ರಪತಿಯವರು ಆ ಸಮುದಾಯಕ್ಕೆ ಸೇರಿದ ಇಬ್ಬರು ಸದಸ್ಯರನ್ನು ನೇಮಕ ಮಾಡಲು ಸಂವಿಧಾನದ 331ನೇ ಅನುಚ್ಛೇದ ಅವಕಾಶ ನೀಡುತ್ತದೆ.

 

ಉತ್ತರ: 1951ರ ಜನಪ್ರತಿನಿಧಿ ಕಾಯ್ದೆಯ 14ನೇ ಸೆಕ್ಸನ್ ಪ್ರಕಾರ ರಾಷ್ಟ್ರಪತಿಯವರು ಒಂದು ಅಧಿಸೂಚನೆಯ ಮೂಲಕ ತಮ್ಮ ಸದನದ ಸದಸ್ಯರನ್ನು ಆಯ್ಕೆ ಮಾಡುವಂತೆ ಕ್ಷೇತ್ರಗಳಿಗೆ ಕರೆ ನೀಡುತ್ತಾರೆ. ಅದಾದ ಬಳಿಕ ಲೋಕಸಭಾ ಕ್ಷೇತ್ರಗಳ ಮತದಾರರು ನೇರವಾಗಿ ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಸಂವಿಧಾನದ 326ನೇ ಅನುಚ್ಛೇದದ ಪ್ರಕಾರ ವಯಸ್ಕ ಮತದಾನದ ಆಧಾರದಲ್ಲಿ ಚುನಾವಣೆ ನಡೆಯಬೇಕು

ಉತ್ತರ: ಒಂದು

ಪ್ರತಿಯೊಂದು ಲೋಕಸಭಾ ಕ್ಷೇತ್ರವು ಕೇವಲ ಒಬ್ಬ ಸದಸ್ಯನನ್ನು ಆಯ್ಕೆ ಮಾಡುತ್ತದೆ.

ಉತ್ತರ: ಇಲ್ಲ.

1962ಕ್ಕೂ ಮುನ್ನ ಏಕ ಮತ್ತು ಬಹು ಸದಸ್ಯರ ಕ್ಷೇತ್ರಗಳಿದ್ದವು. ಈ ಬಹು ಸದಸ್ಯರ ಕ್ಷೇತ್ರಗಳು ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡುತ್ತಿದ್ದವು. 1962ರಲ್ಲಿ ಬಹುಸದಸ್ಯರ ಕ್ಷೇತ್ರಗಳನ್ನು ರದ್ದು ಮಾಡಲಾಯಿತು.

ಉತ್ತರ: 1951-52ರಲ್ಲಿ

ಭಾರತದಲ್ಲಿ ಮೊದಲ ಮಹಾ ಚುನಾವಣೆ ನಡೆದಿದ್ದು 1951-52ರಲ್ಲಿ.

ಉತ್ತರ: ಆ ಸಂದರ್ಭದಲ್ಲಿ ಲೋಕಸಭೆಯ ಒಟ್ಟು ಸದಸ್ಯರ ಬಲ 489 ಆಗಿತ್ತು.

×
ABOUT DULT ORGANISATIONAL STRUCTURE PROJECTS