Back
ಎಫ್ ಎ ಕ್ಯೂ ಕ್ಷೇತ್ರಗಳ ಡಿಲಿಮಿಟೇಶನ್

ಉತ್ತರ: ಸೀಮಾ ನಿರ್ಣಯ ಆಯೋಗ.

ಸಂವಿಧಾನದ 82ನೇ ಅನುಚ್ಛೇದದ ಪ್ರಕಾರ ಪ್ರತಿಯೊಂದು ಜನಗಣತಿಯ ಬಳಿಕ ಸಂಸತ್ತು ಕಾನೂನಿನ ಮೂಲಕ ಸೀಮಾ ನಿರ್ಣಯ ಕಾಯ್ದೆಯನ್ನು ಜಾರಿಗೆ ತರುತ್ತದೆ. ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಕೇಂದ್ರ ಸರ್ಕಾರವು ಸೀಮಾ ನಿರ್ಣಯ ಆಯೋಗವನ್ನು ರಚಿಸುತ್ತದೆ. ಈ ಸೀಮಾ ನಿರ್ಣಯ ಆಯೋಗವು ಸೀಮಾ ನಿರ್ಣಯ ಕಾಯ್ದೆಯಲ್ಲಿನ ಅವಕಾಶಗಳ ಪ್ರಕಾರ ಲೋಕಸಭಾ ಕ್ಷೇತ್ರಗಳ ಗಡಿಗಳನ್ನು ನಿರ್ಣಯ ಮಾಡುತ್ತದೆ. ಈಗಿನ ಕ್ಷೇತ್ರಗಳ ಗಡಿ ನಿರ್ಣಯವನ್ನು 2001ರ ಜನಗಣತಿಯ ಆಧಾರದಲ್ಲಿ 2002ರ ಸೀಮಾ ನಿರ್ಣಯ ಕಾಯ್ದೆಯ ಅವಕಾಶಗಳ ಪ್ರಕಾರ ಮಾಡಲಾಗಿದೆ. ಮೇಲಿನ ಅಂಶಗಳ ಹೊರತಾಗಿಯೂ 2002ರಲ್ಲಿ ಭಾರತದ ಸಂವಿಧಾನದಲ್ಲಿ ವಿಶೇಷ ತಿದ್ದುಪಡಿಯನ್ನು ಮಾಡಿ 2026ರ ಬಳಿಕ ನಡೆಯುವ ಮೊದಲ ಜನಗಣತಿಯ ತನಕ ಕ್ಷೇತ್ರಗಳ ಸೀಮಾ ನಿರ್ಣಯ ಮಾಡುವುದನ್ನು ನಿರ್ಬಂಧಿಸಿದೆ. ಹಾಗಾಗಿ 2001ರ  ಜನಗಣತಿಯ ಆಧಾರದಲ್ಲಿ ರಚಿಸಲಾದ ಈಗಿನ ಕ್ಷೇತ್ರಗಳು 2026ರ ನಂತರ ನಡೆಯುವ ಜನಗತಿಯ ವರೆಗೂ ಮುಂದುವರಿಯಲಿದೆ.

ಉತ್ತರ: ರಾಜ್ಯದ ಜನಸಂಖ್ಯೆ.

ಲೋಕಸಭೆಯ ಸ್ಥಾನಗಳನ್ನು ಹಂಚಿಕೆ ಮಾಡಲು ಜನಸಂಖ್ಯೆಯೇ ಮೂಲ ಆಧಾರ. ಜನಗಣತಿಯ ಅಂಕಿ-ಅಂಶಗಳಂತೆ ಪ್ರತಿಯೊಂದು ರಾಜ್ಯವೂ ಕೂಡ ಸಾಧ್ಯವಿರುವಷ್ಟು ತನ್ನ ಜನಸಂಖ್ಯೆಯ ಸರಾಸರಿಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ಪಡೆಯುತ್ತದೆ.

      

ಉತ್ತರ: ಹೌದು.

ಲೋಕ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸ್ಥಾನಗಳ ಮೀಸಲಾತಿಯನ್ನು ನೀಡಲಾಗಿದೆ. ಇಲ್ಲಿಯೂ ಕೂಡ ಜನಗಣತಿಯ ಅಂಕಿ-ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಉತ್ತರ: 1950ರ ಜನಪ್ರತಿನಿಧಿ ಕಾಯ್ದೆಯ 3ನೇ ಸೆಕ್ಸನ್ ಜೊತೆ ಓದಿಕೊಂಡಂತೆ, ಭಾರತದ ಸಂವಿಧಾನದ 330ನೇ ಅನುಚ್ಛೇಧದಲ್ಲಿ ಇರುವ ಅವಕಾಶಗಳಿಗೆ ತಕ್ಕಂತೆ, ಆಯಾ ರಾಜ್ಯದ ಒಟ್ಟು ಜನಸಂಖ್ಯೆಗೆ ಸಂಬಂಧಪಟ್ಟಂತೆ ಅಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರಾಸರಿಯ ಆಧಾರದಲ್ಲಿ ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ.

ಉತ್ತರ: 84

ಪರಿಶಿಷ್ಟ ಜಾತಿಗಳಿಗೆ ಲೋಕಸಭೆಯಲ್ಲಿ 84 ಸ್ಥಾನಗಳನ್ನು ಮೀಸಲಿಡಲಾಗಿದೆ. 2008ರ ಜನಪ್ರತಿನಿಧಿ (ತಿದ್ದುಪಡಿ) ಕಾಯ್ದೆಯ ಪ್ರಾತಿನಿಧ್ಯಕ್ಕೆ ತಕ್ಕಂತೆ 1950ರ ಜನಪ್ರತಿನಿಧಿ ಕಾಯ್ದೆಯ ಒಂದನೇ ಷೆಡ್ಯೂಲ್ ರಾಜ್ಯವಾರು ವಿಂಗಡಣೆಯನ್ನು ನೀಡುತ್ತದೆ.

ಉತ್ತರ: 47

ಪರಿಶಿಷ್ಟ ಜಾತಿಗಳಿಗೆ ಲೋಕಸಭೆಯಲ್ಲಿ 47 ಸ್ಥಾನಗಳನ್ನು ಮೀಸಲಿಡಲಾಗಿದೆ. 2008ರ ಜನಪ್ರತಿನಿಧಿ (ತಿದ್ದುಪಡಿ) ಕಾಯ್ದೆಯ ಪ್ರಾತಿನಿಧ್ಯಕ್ಕೆ ತಕ್ಕಂತೆ 1950ರ ಜನಪ್ರತಿನಿಧಿ ಕಾಯ್ದೆಯ ಒಂದನೇ ಷೆಡ್ಯೂಲ್ ರಾಜ್ಯವಾರು ವಿಂಗಡಣೆಯನ್ನು ನೀಡುತ್ತದೆ.

ಉತ್ತರ: ಈ ಕೆಳಗಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲೋಕ ಸಭೆಯಲ್ಲಿ ಕೇವಲ ಒಂದು ಸ್ಥಾನವನ್ನು ಹೊಂದಿವೆ:

ಮಿಜೋರಂ,

ನಾಗಾಲ್ಯಾಂಡ್,

ಸಿಕ್ಕಿಂ,

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು,

ಚಂಡೀಗಢ,

ದಾದರ್ ಮತ್ತು ನಗರ್ ಹವೇಲಿ,

ದಮನ್ ಮತ್ತು ದಿಯು,

ಲಕ್ಷದ್ವೀಪ ಮತ್ತು ಪುದುಚೇರಿ.

ಉತ್ತರ: 28.

ಭಾರತದಲ್ಲಿ 28 ರಾಜ್ಯಗಳಿವೆ. ಅವುಗಳೆಂದರೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ್, ಜಾರ್ಖಂಡ್, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಛತ್ತೀಸಗಢ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್, ಒರಿಸ್ಸಾ, ಪಂಜಾಬ್, ರಾಜಸ್ತಾನ, ಸಿಕ್ಕಿಂ, ತಮಿಳು ನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಲ.

ಉತ್ತರ: ಏಳು

ಭಾರತದಲ್ಲಿ ಏಳು ಕೇಂದ್ರಾಡಳಿತ ಪ್ರದೇಶಗಳಿವೆ. ಅವುಗಳೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹ, ಚಂಡೀಗಢ, ದಾದರ್ ಮತ್ತು ನಗರ್ ಹವೇಲಿ, ದಮನ್ ಮತ್ತು ದಿವೂ, ದೆಹಲಿ, ಲಕ್ಷದ್ವೀಪ ಮತ್ತು ಪುದುಚೇರಿ.

×
ABOUT DULT ORGANISATIONAL STRUCTURE PROJECTS