ಹಿಂದೆ
ಸಿಇಓ ಡೆಸ್ಕ್

   

ಶ್ರೀ. ಮನೋಜ್ ಕುಮಾರ್ ಮೀನಾ ಭಾಆಸೇ.,

ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ

ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಕಛೇರಿಯು ರಾಜ್ಯದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ, ಭಾವಚಿತ್ರವಿರುವ ಗುರುತಿನ ಚೀಟಿಯನ್ನು (ಎಪಿಕ್ ಕಾರ್ಡ್) ಮತದಾರರಿಗೆ ಒದಗಿಸುವುದರ ಜೊತೆಗೆ ಮತದಾರರಲ್ಲಿ ಚುನಾವಣಾ ಜಾಗೃತಿ ಮೂಡಿಸಿ, ಚುನಾವಣಾ ವ್ಯವಸ್ಥೆಯಲ್ಲಿ ಮುಕ್ತ, ನ್ಯಾಯೋಚಿತ ಹಾಗೂ ಪಾರದರ್ಶಕತೆಯನ್ನು ಜಾರಿಗೊಳಿಸಿ, ಚುನಾವಣೆ ನಡೆಸುವುದು ಈ ಕಛೇರಿಯ ಧ್ಯೇಯೋದ್ದೇಶವಾಗಿರುತ್ತದೆ. 

ಈ ನಿಟ್ಟಿನಲ್ಲಿ ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಕಛೇರಿಯ ಜಾಲತಾಣವನ್ನು (https://ceo.karnataka.gov.in) ಹೊಸದಾಗಿ ರೂಪಿಸಲಾಗಿದ್ದು, ಈ ಜಾಲತಾಣವು ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ನಿಯಮ, ಆದೇಶ, ಮಾರ್ಗಸೂಚಿ, ಕೈಪಿಡಿ, ಮತಕ್ಷೇತ್ರದ ಪರಿಮಿತಿ ಹಾಗೂ ಚುನಾವಣಾ ಕಾರ್ಯನಿರತ ಅಧಿಕಾರಿಗಳ ವಿವರವನ್ನೊಳಗೊಂಡ ಮಾಹಿತಿಗಳನ್ನು ನಾಗರೀಕರಿಗೆ ಒದಗಿಸುವುದರ ಜೊತೆಗೆ ಮತದಾರರ ನೋಂದಣಿ ಮತ್ತು ಗುರುತಿನ ಚೀಟಿಯ (ಎಪಿಕ್) ವಿತರಣೆಯಲ್ಲಿ ನಾಗರೀಕರ ಮತ್ತು ಈ ಕಛೇರಿಯ ನಡುವೆ ಸಂಪರ್ಕ ಕೊಂಡಿಯಂತೆ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ. ಈ ನಮ್ಮ ಜಾಲತಾಣವನ್ನು ಹೆಚ್ಚು ಪಾರದರ್ಶಕ ಹಾಗೂ ನಾಗರೀಕ ಸ್ನೇಹಿಯನ್ನಾಗಿ ರೂಪಿಸಲು ಮತದಾರ ನಾಗರೀಕರು ಹಾಗೂ ಸಾರ್ವಜನಿಕರು ತಮ್ಮ ಅಮೂಲ್ಯವಾದ ಅಭಿಪ್ರಾಯ / ಸಲಹೆ / ಪ್ರತಿಕ್ರಿಯೆಗಳನ್ನು ನೀಡಬೇಕಾಗಿ ಕೋರಿದೆ.

 

 

×
ABOUT DULT ORGANISATIONAL STRUCTURE PROJECTS