Back
ಆಗಾಗ ಕೇಳಲಾದ ಪ್ರಶ್ನೆಗಳು (ಎಫ್‌ಎಕ್ಯೂ)- ಸಾಮಾನ್ಯ

ಉತ್ತರ: ಒಂದು ವೇಳೆ ಅದೇ ಕ್ಷೇತ್ರದಲ್ಲಿ ನಿಮ್ಮ ಮನೆ ಇದ್ದರೆ 8ಎ ಅರ್ಜಿ ನಮೂನೆಯನ್ನು ತುಂಬಿ. ಇಲ್ಲವಾದರೆ ಅರ್ಜಿ ನಮೂನೆ 6ನ್ನು ಭರ್ತಿ ಮಾಡಿ ಅದನ್ನು ನಿಮ್ಮ ಹೊಸ ನಿವಾಸ ಸ್ಥಾನವಿರುವ ಪ್ರದೇಶದ ಇಆರ್.ಓ (ಎಸ್.ಡಿ.ಎಂ) ಅಥವಾ ಎಇಆರ್.ಓ (ಎಫ್ಎಸ್ಓ)ಗೆ ಸಲ್ಲಿಸಿ.

 

ಉತ್ತರ: ಮೊದಲನೆಯದಾಗಿ ಒಂದನೇ ಸಂಖ್ಯೆಯ ಉತ್ತರದಲ್ಲಿ ತಿಳಿಸಿರುವ ಕ್ರಮದಂತೆ ನೀವು ಈಗ ವಾಸವಿರುವ ಸಂಬಂಧಪಟ್ಟ ಎಸಿಯ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದೀರಾ ಎಂಬುದನ್ನು ಖಾತರಿಪಡಿಸಿಕೊಳ್ಳಿ. 

ಉತ್ತರ: ಫೋಟೊ ಗುರುತಿನ ಚೀಟಿಯನ್ನು ಸಿದ್ಧಪಡಿಸುವ ಕಾರ್ಯ ಆರಂಭವಾದ ಬಳಿಕ ಸಂಬಂಧಪಟ್ಟ ಇ.ಆರ್.ಓ ಕೇಂದ್ರದಲ್ಲಿ ನಿಮ್ಮ ಗುರುತಿನ ಚೀಟಿನಲ್ಲಿ ನೀಡುವ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ ಅಥವಾ nvsp ಪೋರ್ಟಲ್‍ನಲ್ಲಿ ನಮೂನೆ8 ಅರ್ಜಿ ಹಾಕಿ ಸರಿಪಡಿಸಿಕೊಳ್ಳಬಹುದು.

ಉತ್ತರ: ಪಡಿತರ ಚೀಟಿ ಅಗತ್ಯವಿಲ್ಲ. ಆದರೆ ಪಾಸ್-ಪೋರ್ಟ್, ಬ್ಯಾಂಕ್ ಪಾಸ್-ಬುಕ್, ಚಾಲಕರ ಪರವಾನಗಿ ಇತ್ಯಾದಿ  ಅಥವಾ ನೋಂದಣಿ ಕೆಲಸವನ್ನು ದೃಢೀಕರಿಸುವ ಯಾವುದೇ ಸರ್ಕಾರಿ ದಾಖಲೆಯಂತಹ ವಾಸ ಸ್ಥಳದ ಇತರ ಯಾವುದೇ ಪುರಾವೆಯನ್ನು ನೀವು ತೋರಿಸಬಹುದು.

ಉತ್ತರ: ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವುದು ನಿಮ್ಮ ಮೂಲಭೂತ ಹಕ್ಕು. ನಿಮ್ಮ ಪ್ರದೇಶದ ಇ.ಆರ್.ಓ (ಎಸ್.ಡಿ.ಎಂ)/ಎ..ಇ.ಆರ್.ಓ (ಎಫ್.ಎಸ್.ಓ) ಕಚೇರಿಯ ಮತದಾರರ ಪಟ್ಟಿಯನ್ನು ಪರಿಶೀಲಿಸಿ. ಅದರಲ್ಲಿ ನಿಮ್ಮ ಹೆಸರು ಇಲ್ಲವಾದರೆ ಅರ್ಜಿ ನಮೂನೆ 6ನ್ನು ಭರ್ತಿ ಮಾಡಿ ಮತ್ತು ಅದನ್ನು ಇ.ಆರ್.ಓನಲ್ಲಿ ನೀಡಿ.

ಉತ್ತರ: ದಯವಿಟ್ಟು ನಿಮ್ಮ ಹಿಂದಿನ ವಿಳಾಸದಿಂದ ಹೆಸರನ್ನು ತೆಗೆದು ಹಾಕಿ. ಹಾಗೆ ಮಾಡುವುದರಿಂದ ಕರ್ನಾಟಕದಲ್ಲಿ ನಿಮ್ಮ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದಾದ ಬಳಿಕ ಅರ್ಜಿ ನಮೂನೆ 6ನ್ನು ಭರ್ತಿ ಮಾಡಿ ಹಿಂದಿನ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆದುಹಾಕಿರುವ ಪುರಾವೆಯ ಜೊತೆಗೆ ಅದನ್ನು ಎಸ್.ಡಿ.ಎಂ/ಎಫ್.ಎಸ್.ಓ ಕಚೇರಿಯಲ್ಲಿ ನೀಡುವ ಮೂಲಕ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಿ. ಗುರುತಿನ ಚೀಟಿಯ ಹಿಂಭಾಗದಲ್ಲಿ ನಿಮ್ಮ ವಿಳಾಸವನ್ನು ಬದಲಿಸಬಹುದು ಮತ್ತು ಅದು ಸಿಂಧುವಾಗಿರುತ್ತದೆ.

 

ಉತ್ತರ: ಅಧಿಕೃತ ಸಂಸ್ಥೆಯಿಂದ (ಪಾಸ್-ಪೋರ್ಸ್, ಮೆಟ್ರಿಕ್ ಪ್ರಮಾಣಪತ್ರ, ಜನನ ದಿನಾಂಕದ ಪ್ರಮಾಣಪತ್ರ ಇತ್ಯಾದಿ)ನೀವು ನಿಮ್ಮ ಜನನ ದಿನಾಂಕದ ಪುರಾವೆಯನ್ನು ಸಲ್ಲಿಸಬಹುದು. 

ಉತ್ತರ: ಅದರ ಅಗತ್ಯವೇನೂ ಇರುವುದಿಲ್ಲ, ಆದರೆ ನೀವು ನಿಮ್ಮ ವಾಸಸ್ಥಳದ ಪುರಾವೆಯನ್ನು ಜೊತೆಗೆ ಸಲ್ಲಿಸಿದರೆ ನೀವು ಒದಗಿಸಿದ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಸಹಾಯವಾಗುತ್ತದೆ.

ಉತ್ತರ: ಮತದಾರರ ಗುರುತಿನ ಚೀಟಿಯನ್ನು ಸಿದ್ಧಪಡಿಸಲು ಕಾಲಕಾಲಕ್ಕೆ ವಿಶೇಷ ಪ್ರಚಾರಾಂದೋಲನವನ್ನು ನಡೆಸಲಾಗುತ್ತದೆ. ಆ ಕಾರ್ಯಕ್ರಮದ ವಿವರಗಳು, ನಿಯೋಜಿತ ಸ್ಥಳವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ ಮತ್ತು ವೆಬ್-ಸೈಟ್ ನಲ್ಲಿ ಲಭ್ಯವಿರುತ್ತದೆ. ನಿಮ್ಮ ಪ್ರದೇಶದ ಜಂಟಿ ಸಿಇಓ/ಡಿಸಿ ಕಚೇರಿಯಲ್ಲಿ ನಿರಂತರವಾಗಿ ಐಡಿ ಕಾರ್ಡ್ ಸಿದ್ಧಪಡಿಸಲಾಗುತ್ತದೆ.

ಉತ್ತರ: ಗಣತಿಕಾರನು ನಿಮಗೆ ಗಣತಿಯ ದಾಖಲೆಯನ್ನು ನೀಡಿರಬೇಕು, ಅದುವೇ ನಿಮ್ಮ ಸ್ವೀಕೃತಿ ಪತ್ರವಾಗಿರುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ಖಾತರಿ ಮಾಡಿಕೊಳ್ಳಲು ಸಂಬಂಧಪಟ್ಟ ಇ.ಆರ್.ಓ ಕಚೇರಿಯಲ್ಲಿ ಲಭ್ಯವಿರುವ ಕರಡು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ. 

 

ಉತ್ತರ: ಇಆರ್ ಓ ಕಛೇರಿಯಲ್ಲಿ ನೀವು ನಿಮ್ಮ ಪೂರ್ಣ ವಿಳಾಸವನ್ನು ಹೇಳಿದಾಗಲಷ್ಟೇ ಅದನ್ನು ತಿಳಿಸಲು ಸಾಧ್ಯವಾಗುತ್ತದೆ. ಸಂಬಂಧಿಸಿದ ಸಂಪರ್ಕ ಸಂಖ್ಯೆ-1950. ನೀವು ಇಸಿಐ ಅಥವಾ ಸಿಇಓ ಕಛೇರಿ ವೆಬ್-ಸೈಟ್ ನಲ್ಲಿ ಕೂಡ ಪರಿಶೀಲಿಸಬಹುದು. 

 

ಉತ್ತರ: ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ಎಫ್.ಐ.ಆರ್. ಪ್ರತಿಯನ್ನು ನೀವು ಸಲ್ಲಿಸಬಹುದು. 25 ರೂ. ಪಾವತಿ ಮಾಡಿದ ಬಳಿಕ ನಿಮಗೆ ಹೊಸ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಗುರುತಿನ ಚೀಟಿಗಳನ್ನು ನೀಡುವ ದಿನಾಂಕಗಳನ್ನು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಇಆರ್ ಓ/ಡಿಸಿ ಕಚೇರಿಯಲ್ಲಿಯೂ ಇದನ್ನು ಪ್ರಕಟಿಸಲಾಗುತ್ತದೆ, ಆ ಬಳಿಕ ವರ್ಷವಿಡೀ ಗುರುತಿನ ಚೀಟಿಗಳನ್ನು ಮಾಡಲಾಗುತ್ತದೆ. 

ಉತ್ತರ: ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಚುನಾವಣಾ ಕೆಲಸವನ್ನು ಮುಖ್ಯ ಚುನಾವಣಾ ಅಧಿಕಾರಿ (ಸಿಇಓ) ಮೇಲ್ವಿಚಾರಣೆ ನಡೆಸುತ್ತಾರೆ. 

 

1951ರ ಜನಪ್ರತಿನಿಧಿ ಕಾಯ್ದೆಯ 20ನೇ ಸೆಕ್ಸನ್ ನೊಂದಿಗೆ ಓದಿಕೊಳ್ಳುವ 1950ರ ಜನಪ್ರತಿನಿಧಿ ಕಾಯ್ದೆಯ 13ಎ ಸೆಕ್ಸನ್ ಪ್ರಕಾರ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಚುನಾವಣಾಧಿಕಾರಿಯು, ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಚುನಾವಣಾ ಕಾರ್ಯದ ಮೇಲ್ವಿಚಾರಣೆಯನ್ನು ನಡೆಸುವ ಅಧಿಕಾರವನ್ನು ಹೊಂದಿರುತ್ತಾರೆ

ಉತ್ತರ: ಭಾರತದ ಚುನಾವಣಾ ಆಯೋಗ (ಇಸಿಐ). 

 

ಸಂಬಂಧಪಟ್ಟ ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶದ ಆಡಳಿತದ ಜೊತೆ ಸಮಾಲೋಚನೆ ನಡೆಸಿದ ಬಳಿಕ ಭಾರತದ ಚುನಾವಣಾ ಆಯೋಗ ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರದ ಅಧಿಕಾರಿಯೊಬ್ಬರನ್ನು ನೇಮಕ ಮಾಡುತ್ತದೆ ಅಥವಾ ನಿಯೋಜನೆ ಮಾಡುತ್ತದೆ.

ಉತ್ತರ: ಜಿಲ್ಲಾ ಚುನಾವಣಾ ಅಧಿಕಾರಿ. ಕರ್ನಾಟಕದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಯು ಜಂಟಿ ಚುನಾವಣಾ ಅಧಿಕಾರಿಯಾಗಿ ನಿಯೋಜಿತರಾಗಿರುತ್ತಾರೆ. 1950ರ ಜನಪ್ರತಿನಿಧಿ ಕಾಯ್ದೆಯ 13ಎಎ ಸೆಕ್ಸನ್ ಪ್ರಕಾರ, ಮುಖ್ಯ ಚುನಾವಣಾ ಅಧಿಕಾರಿಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದಂತೆ ಜಿಲ್ಲಾ ಚುನಾವಣಾಧಿಕಾರಿ ಜಿಲ್ಲೆಯ ಚುನಾವಣೆಯ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.

ಉತ್ತರ: ಭಾರತದ ಚುನಾವಣಾ ಆಯೋಗ (ಇಸಿಐ)

 

ಭಾರತದ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ಮಾಡುವ ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರನ್ನು ಜಿಲ್ಲಾ ಚುನಾವನಾ ಅಧಿಕಾರಿಯಾಗಿ ನೇಮಕ ಅಥವಾ ನಿಯೋಜನೆ ಮಾಡುತ್ತದೆ. 

ಉತ್ತರ: ಚುನಾವಣಾಧಿಕಾರಿ (ಆರ್.ಓ). ಕರ್ನಾಟಕ ರಾಜ್ಯದ ವಿಚಾರದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಆರ್.ಓ. ಆಗಿರುತ್ತಾರೆ. 

 

1951ರ ಜನಪ್ರತಿನಿಧಿ ಕಾಯ್ದೆಯ 21ನೇ ಸೆಕ್ಸನ್ ಪ್ರಕಾರ ಸಂಬಂಧಿಸಿದ ಲೋಕಸಭಾ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗಳನ್ನು ನಡೆಸುವುದು ಆಯಾ ಲೋಕಸಭಾ ಅಥವಾ ಚುನಾವಣಾ ಕ್ಷೇತ್ರದ ಚುನಾವಣಾಧಿಕಾರಿಯ ಜವಾಬ್ದಾರಿಯಾಗಿರುತ್ತದೆ.

ಉತ್ತರ: ಭಾರತದ ಚುನಾವಣಾ ಆಯೋಗ (ಇಸಿಐ).

 

ಸಂಬಂಧಪಟ್ಟ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶದ ಆಡಳಿತದ ಜೊತೆ ಸಮಾಲೋಚನೆ ನಡೆಸಿದ ಬಳಿಕ ಭಾರತದ ಚುನಾವಣಾ ಆಯೋಗವು ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಿಗೆ ಸರ್ಕಾರದ ಒಬ್ಬರು ಅಧಿಕಾರಿಯನ್ನು ಅಥವಾ ಸ್ಥಳೀಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಕ ಅಥವಾ ನಿಯೋಜನೆ ಮಾಡುತ್ತದೆ. ಇದರ ಜೊತೆಗೆ, ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಕಾರ್ಯವನ್ನು ನಿರ್ವಹಿಸುವಲ್ಲಿ ಚುನಾವಣಾಧಿಕಾರಿಗೆ ಸಹಾಯ ಮಾಡಲು ಪ್ರತಿ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳಿಗೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಹಾಯಕ ಚುನಾವಣಾಧಿಕಾರಿಗಳನ್ನು ಭಾರತ ಚುನಾವಣಾ ಆಯೋಗವು ನೇಮಕ ಮಾಡುತ್ತದೆ.

 

ಉತ್ತರ: ಮತದಾರರ ನೋಂದಣಾಧಿಕಾರಿ (ಇ.ಆರ್.ಓ). ಕರ್ನಾಟಕದ ವಿಷಯದಲ್ಲಿ ಇವು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್/ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್/ಎಡಿಎಂಗಳ ಜವಾಬ್ದಾರಿಯಾಗಿರುತ್ತದೆ. 

ಉತ್ತರ:  ಅಧ್ಯಕ್ಷಾಧಿಕಾರಿ 

 

ಮತಗಟ್ಟೆಯಲ್ಲಿ ಅಧ್ಯಕ್ಷಾಧಿಕಾರಿಯು ಮತಗಟ್ಟೆ ಅಧಿಕಾರಿಯ ಸಹಾಯದೊಂದಿಗೆ ಮತದಾನದ ಪ್ರಕ್ರಿಯೆಯನ್ನು ನಡೆಸುತ್ತಾನೆ.

ಉತ್ತರ: 1950ರ ಜನಪ್ರತಿನಿಧಿ ಕಾಯ್ದೆಯ 13ಬಿ ಸೆಕ್ಸನ್ ಅಡಿಯಲ್ಲಿ ಭಾರತದ ಚುನಾವಣಾ ಆಯೋಗವು ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಸರ್ಕಾರದ ಅಧಿಕಾರಿಯನ್ನು ಅಥವಾ ಸ್ಥಳೀಯ ಅಧಿಕಾರಿಯನ್ನು ಮತದಾರರ  ನೋಂದಣಾಧಿಕಾರಿಯಾಗಿ ನೇಮಕ ಮಾಡುತ್ತದೆ.  ಇದರ ಜೊತೆಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ/ಪರಿಷ್ಕರಿಸುವ ಕಾರ್ಯದಲ್ಲಿ ಮತದಾರರ ನೋಂದಣಾಧಿಕಾರಿಗೆ ಸಹಕರಿಸಲು ಭಾರತದ ಚುನಾವಣಾ ಆಯೋಗವು ಒಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಸಹಾಯಕ ಮತದಾರರ ನೋಂದಣಾಧಿಕಾರಿಯನ್ನು ನೇಮಕ ಮಾಡುತ್ತದೆ.

ಉತ್ತರ: ಹದಿನೆಂಟು ವರ್ಷಗಳು. 

 

ಸಂವಿಧಾನದ 326ನೇ ಪರಿಚ್ಛೇದದ ಪ್ರಕಾರ ಮತ್ತು 1950ರ ಜನಪ್ರತಿನಿಧಿ ಕಾಯ್ದೆಯ 19ನೇ ಸೆಕ್ಸನ್ ಪ್ರಕಾರ ಪ್ರತಿಯೊಂದು ಕ್ಷೇತ್ರಕ್ಕೂ ಮತದಾರರ ಪಟ್ಟಿಯಿದ್ದು, ಅದರಂತೆ ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಕನಿಷ್ಠ ವರ್ಷ 18 ಎಂದು ನಿಗದಿ ಮಾಡಲಾಗಿದೆ.

ಉತ್ತರ: ಇಲ್ಲ. 

 

ಮೊದಲು ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಇದ್ದ ವಯಸ್ಸು 21 ವರ್ಷ. 1950ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡುವ 1989ರ 21ನೇ ಕಾಯ್ದೆಯನ್ನು ಓದಿಕೊಳ್ಳುವ ಸಂವಿಧಾನದ 61ನೇ ತಿದ್ದುಪಡಿ ಕಾಯ್ದೆ-1988ರ ಮೂಲಕ ಮತದಾರನಾಗಿ ನೋಂದಣಿ ಮಾಡಿಕೊಳ್ಳುವ ವಯೋಮಿತಿಯನ್ನು 18 ವರ್ಷಕ್ಕೆ ಇಳಿಸಲಾಗಿದೆ. ಇದನ್ನು 28/03/1989ರಿಂದ ಜಾರಿಗೆ ತರಲಾಗಿದೆ.

ಉತ್ತರ: 1950ರ ಜನಪ್ರತಿನಿಧಿ ಕಾಯ್ದೆಯ 14(ಬಿ).  ಸೆಕ್ಸನ್ ಪ್ರಕಾರ, ಅರ್ಹತಾ ದಿನಾಂಕ ಎಂದರೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಥವಾ ಪರಿಷ್ಕರಿಸುವ ವರ್ಷದ ಜನವರಿ ತಿಂಗಳ ಮೊದಲ ದಿನ ಎಂದು ಅರ್ಥ. 1951ರ ಜನಪ್ರತಿನಿಧಿ ಕಾಯ್ದೆಯ 20ನೇ ಸೆಕ್ಸನ್ ಜೊತೆ  ಓದಿಕೊಳ್ಳುವ 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಸನ್ 13ಎ ಪ್ರಕಾರ ಚುನಾವಣಾ ಆಯೋಗದ ಒಟ್ಟಾರೆ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗೆ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣಾ ಕಾರ್ಯದ ಮೇಲ್ವಿಚಾರಣೆಯನ್ನು ನಡೆಸಲು ಅಧಿಕಾರ ನೀಡಲಾಗಿದೆ.

ಉತ್ತರ: 1989.

 

1989ರಲ್ಲಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು.

ಉತ್ತರ: ಇಲ್ಲ

 

ಭಾರತದ ನಾಗರಿಕನಲ್ಲದ ವ್ಯಕ್ತಿ ಮತದಾರನಾಗಿ ನೋಂದಣಿಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಸನ್ 16ರೊಂದಿಗೆ ಓದಿಕೊಳ್ಳುವಂತೆ ಸಂವಿಧಾನದ 326ನೇ ವಿಧಿಯು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ.

 

ಉತ್ತರ: 1950ರ ಜನಪ್ರತಿನಿಧಿ ಕಾಯ್ದೆಯ 19ನೇ ಸೆಕ್ಸನ್ ಪ್ರಕಾರ ಒಂದು ಕ್ಷೇತ್ರದಲ್ಲಿ ಮೂಲದಿಂದಲೂ ವಾಸವಾಗಿರುವ ವ್ಯಕ್ತಿಯು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹತೆಯನ್ನು ಪಡೆಯುತ್ತಾನೆ. ಆದಾಗ್ಯೂ, ಭಾರತ ಸರ್ಕಾರದ ಅಡಿಯಲ್ಲಿ ಭಾರತದಿಂದ ಹೊರಗೆ ಹುದ್ದೆಯೊಂದರಲ್ಲಿ ನೇಮಕಗೊಂಡಿರುವ ಅನಿವಾಸಿ ಭಾರತೀಯ ಪ್ರಜೆಗಳು 1950ರ ಜನಪ್ರತಿನಿಧಿ ಕಾಯ್ದೆಯ 20(3)ನೇ ಸೆಕ್ಸನ್ ನೊಂದಿಗೆ ಓದಿಕೊಳ್ಳುವ 20(8)(ಡಿ) ಸೆಕ್ಸನ್ ನ ನಿಯಮಗಳ ಪ್ರಕಾರ ಮತದಾರರೆಂದು ನೋಂದಣಿ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ. 

ಉತ್ತರ: ಇಲ್ಲ

 

ನೀವು ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ವಾಸವಾಗಿದ್ದರೆ 19(ಬಿ)ನೇ ಸೆಕ್ಸನ್ ನಿಯಮಗಳ ಪ್ರಕಾರ ನೀವು ಕರ್ನಾಟಕದ ಸಾಮಾನ್ಯ ನಿವಾಸಿಯಾಗಿರುತ್ತೀರಿ. ಹಾಗಾಗಿ ನೀವು ಕರ್ನಾಟಕದಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳಬಹುದೇ ಹೊರತು ನಿಮ್ಮ ಗ್ರಾಮದಲ್ಲಿ ಅಲ್ಲ.

ಉತ್ತರ: ಇಲ್ಲ.

 

1950ರ ಜನಪ್ರತಿನಿಧಿ ಕಾಯ್ದೆಯ 17 ಮತ್ತು 18ನೇ ಸೆಕ್ಸನ್ ಅಡಿಯಲ್ಲಿ ನಿರ್ಬಂಧಿಸಿದ ಅವಕಾಶಗಳ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರದ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರನಾಗಿ ನೋಂದಣಿ ಮಾಡಿಕೊಳ್ಳುವಂತಿಲ್ಲ.

×
ABOUT DULT ORGANISATIONAL STRUCTURE PROJECTS