Back
ಆಗಾಗ ಕೇಳಲಾದ ಪ್ರಶ್ನೆಗಳು (ಎಫ್‌ಎಕ್ಯೂ)- ಮತದಾರರ ಪಟ್ಟಿ

ಉತ್ತರ: ಹದಿನೆಂಟು ವರ್ಷಗಳು

1950ರ ಜನಪ್ರತಿನಿಧಿ ಕಾಯ್ದೆಯ ಸೆ.19 ಮತ್ತು ಸಂವಿಧಾನದ 326ನೇ ಅನುಚ್ಛೇಧದ ಪ್ರಕಾರ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮತದಾರರ ಪಟ್ಟಿ ಇದ್ದು ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಕನಿಷ್ಠ ವರ್ಷ 18 ವರ್ಷಗಳಾಗಿವೆ.

ಉತ್ತರ: ಇಲ್ಲ.

ಮೊದಲು ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಇದ್ದ ವಯಸ್ಸು 21 ವರ್ಷ. 1950ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡುವ 1989ರ 21ನೇ ಕಾಯ್ದೆಯನ್ನು ಓದಿಕೊಳ್ಳುವ ಸಂವಿಧಾನದ 61ನೇ ತಿದ್ದುಪಡಿ ಕಾಯ್ದೆ-1988ರ ಮೂಲಕ ಮತದಾರನಾಗಿ ನೋಂದಣಿ ಮಾಡಿಕೊಳ್ಳುವ ವಯೋಮಿತಿಯನ್ನು 18 ವರ್ಷಕ್ಕೆ ಇಳಿಸಲಾಗಿದೆ. ಇದನ್ನು 28/03/1989ರಿಂದ ಜಾರಿಗೆ ತರಲಾಗಿದೆ.

ಉತ್ತರ: 1950ರ ಜನಪ್ರತಿನಿಧಿ ಕಾಯ್ದೆಯ 14(ಬಿ).  ಸೆಕ್ಸನ್ ಪ್ರಕಾರ, ಅರ್ಹತಾ ದಿನಾಂಕ ಎಂದರೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಥವಾ ಪರಿಷ್ಕರಿಸುವ ವರ್ಷದ ಜನವರಿ ತಿಂಗಳ ಮೊದಲ ದಿನ ಎಂದು ಅರ್ಥ

ಉತ್ತರ: ಇಲ್ಲ

ಭಾರತದ ನಾಗರಿಕನಲ್ಲದ ವ್ಯಕ್ತಿ ಮತದಾರನಾಗಿ ನೋಂದಣಿಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಸನ್ 16ರೊಂದಿಗೆ ಓದಿಕೊಳ್ಳುವಂತೆ ಸಂವಿಧಾನದ 326ನೇ ವಿಧಿಯು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ.

ಉತ್ತರ: 1950ರ ಜನಪ್ರತಿನಿಧಿ ಕಾಯ್ದೆಯ 19ನೇ ಸೆಕ್ಸನ್ ಪ್ರಕಾರ ಒಂದು ಕ್ಷೇತ್ರದಲ್ಲಿ ಮೂಲದಿಂದಲೂ ವಾಸವಾಗಿರುವ ವ್ಯಕ್ತಿಯು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹತೆಯನ್ನು ಪಡೆಯುತ್ತಾನೆ. ಆದಾಗ್ಯೂ, ಭಾರತ ಸರ್ಕಾರದ ಅಡಿಯಲ್ಲಿ ಭಾರತದಿಂದ ಹೊರಗೆ ಹುದ್ದೆಯೊಂದರಲ್ಲಿ ನೇಮಕಗೊಂಡಿರುವ ಅನಿವಾಸಿ ಭಾರತೀಯ ಪ್ರಜೆಗಳು 1950ರ ಜನಪ್ರತಿನಿಧಿ ಕಾಯ್ದೆಯ 20(3)ನೇ ಸೆಕ್ಸನ್ ನೊಂದಿಗೆ ಓದಿಕೊಳ್ಳುವ 20(8)(ಡಿ) ಸೆಕ್ಸನ್ ನ ನಿಯಮಗಳ ಪ್ರಕಾರ ಮತದಾರರೆಂದು ನೋಂದಣಿ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ.

ಉತ್ತರ: ಇಲ್ಲ

ನೀವು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಯೇ ವಾಸವಾಗಿದ್ದರೆ 19(ಬಿ)ನೇ ಸೆಕ್ಸನ್ ನಿಯಮಗಳ ಪ್ರಕಾರ ನೀವು ಬೆಂಗಳೂರಿನ ಸಾಮಾನ್ಯ ನಿವಾಸಿಯಾಗಿರುತ್ತೀರಿ. ಹಾಗಾಗಿ ನೀವು ಬೆಂಗಳೂರಿನಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳಬಹುದೇ ಹೊರತು ನಿಮ್ಮ ಗ್ರಾಮದಲ್ಲಿ ಅಲ್ಲ.

ಉತ್ತರ: ಇಲ್ಲ.

1950ರ ಜನಪ್ರತಿನಿಧಿ ಕಾಯ್ದೆಯ 17 ಮತ್ತು 18ನೇ ಸೆಕ್ಸನ್ ಅಡಿಯಲ್ಲಿ ನಿರ್ಬಂಧಿಸಿದ ಅವಕಾಶಗಳ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿ ಒಂದೇ ಕ್ಷೇತ್ರ ಅಥವಾ ಒಂದಕ್ಕಿಂತ ಹೆಚ್ಚು ಕ್ಷೇತ್ರದ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ.

ಉತ್ತರ: ಅರ್ಜಿ ನಮೂನೆ 6ನ್ನು ಭರ್ತಿ ಮಾಡಿ ಅದನ್ನು ವಿಧಾನಸಭಾ ಕ್ಷೇತ್ರದ ಇಆರ್.ಓಗೆ ಸಲ್ಲಿಸಬೇಕು.

ಉತ್ತರ: ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಳನ್ನು ಮಾಡಲು ನೀವು ನಿಮ್ಮ ವಿಧಾನಸಭಾ ಕ್ಷೇತ್ರದ ಇ.ಆರ್.ಓಗೆ ಅರ್ಜಿ ನಮೂನೆ 8ನ್ನು ಸಲ್ಲಿಸಬೇಕು.

ಕೆಳಗಿನ ನಾನಾ ಅರ್ಜಿ ನಮೂನೆಗಳು ಮತದಾರರಾಗಿ ನೋಂದಣಿ ಮಾಡಿಕೊಳ್ಳಲು, ತಿದ್ದುಪಡಿಗಳನ್ನು ಮಾಡಲು, ವಿಳಾಸದಲ್ಲಿ ಬದಲಾವಣೆ ಮಾಡಿಕೊಳ್ಳು ಉಪಯುಕ್ತ.

ಹೆಸರುಗಳನ್ನು ಸೇರಿಸಲು: ಅರ್ಜಿ ನಮೂನೆ -6

ಹೆಸರನ್ನು ಸೇರಿಸಲು ಯಾವುದೇ ಆಕ್ಷೇಪ ಇದ್ದರೆ: ಅರ್ಜಿ ನಮೂನೆ-7

ಮತದಾರರ ಪಟ್ಟಿಯಲ್ಲಿನ ವಿವರಗಳಿಗೆ ತಿದ್ದುಪಡಿ ಮಾಡಲು: ಅರ್ಜಿ ನಮೂನೆ -8

ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಸ್ಥಳಾಂತರ ಮಾಡಲು: ಅರ್ಜಿ ನಮೂನೆ 8ಎ

ಉತ್ತರ: ಒಂದು ವೇಳೆ ಅದೇ ಕ್ಷೇತ್ರದಲ್ಲಿ ನಿಮ್ಮ ಮನೆ ಇದ್ದರೆ 8ಎ ಅರ್ಜಿ ನಮೂನೆಯನ್ನು ತುಂಬಿ. ಇಲ್ಲವಾದರೆ ಅರ್ಜಿ ನಮೂನೆ 6ನ್ನು ಭರ್ತಿ ಮಾಡಿ ಅದನ್ನು ನಿಮ್ಮ ಹೊಸ ನಿವಾಸ ಸ್ಥಾನವಿರುವ ಪ್ರದೇಶದ ಇಆರ್.ಓ (ಎಸ್.ಡಿ.ಎಂ) ಅಥವಾ ಎಇಆರ್.ಓ (ಎಫ್ಎಸ್ಓ)ಗೆ ಸಲ್ಲಿಸಿ.

ಉತ್ತರ: ಮೊದಲನೆಯದಾಗಿ ಒಂದನೇ ಸಂಖ್ಯೆಯ ಉತ್ತರದಲ್ಲಿ ತಿಳಿಸಿರುವ ಕ್ರಮದಂತೆ ನೀವು ಈಗ ವಾಸವಿರುವ ಸಂಬಂಧಪಟ್ಟ ಎಸಿಯ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದೀರಾ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ಉತ್ತರ: ಸಂಬಂಧಪಟ್ಟ ಇ.ಆರ್.ಓ ಕಚೇರಿಯಲ್ಲಿ ನಿಮ್ಮ ಎಪಿಕ್ ಕಾರ್ಡ್ ನೀಡುವ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ. ನಿಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇರುವ ನಿಯೋಜಿತ ಮತದಾರರ ಸೌಲಭ್ಯ ಕೇಂದ್ರದಲ್ಲಿಯೂ ನೀವು ಎಪಿಕ್ ಪಡೆದುಕೊಳ್ಳಬಹುದಾಗಿದೆ.

ಉತ್ತರ: ಪಡಿತರ ಚೀಟಿಯನ್ನು ಹೊಂದಿರುವುದು ಕಡ್ಡಾಯವಲ್ಲ. ಆದರೆ ಪಾಸ್-ಪೋರ್ಟ್, ಬ್ಯಾಂಕ್ ಪಾಸ್-ಬುಕ್, ಚಾಲಕರ ಪರವಾನಗಿ ಇತ್ಯಾದಿ  ಅಥವಾ ನೋಂದಣಿ ಕೆಲಸವನ್ನು ದೃಢೀಕರಿಸುವ ಯಾವುದೇ ಸರ್ಕಾರಿ ದಾಖಲೆಯಂತಹ ವಾಸ ಸ್ಥಳದ ಇತರ ಯಾವುದೇ ಪುರಾವೆಯನ್ನು ನೀವು ತೋರಿಸಬಹುದು.

ಉತ್ತರ:  ಸಂಬಂಧಪಟ್ಟ ನಗರಸಭೆ/ಪಂಚಾಯತ್ ನೀಡಿರುವ ಜನನ ಪ್ರಮಾಣಪತ್ರವನ್ನು ನೀವು ಸಲ್ಲಿಸಬಹುದು. ಇತರ ಅರ್ಹ ದಾಖಲೆಗಳಾದ ಎಸ್ಎಸ್ಎಸ್ಲಿ/ಬೋರ್ಡ್ ಪ್ರಮಾಣಪತ್ರ ಅಥವಾ ಪಾಸ್-ಪೋರ್ಟ್ ಅನ್ನು ಕೂಡ ಸಲ್ಲಿಸಬಹುದು.

ಉತ್ತರ: ಅದರ ಅಗತ್ಯವೇನೂ ಇರುವುದಿಲ್ಲ, ಆದರೆ ನೀವು ನಿಮ್ಮ ವಾಸಸ್ಥಳದ ಪುರಾವೆಯನ್ನು ಜೊತೆಗೆ ಸಲ್ಲಿಸಿದರೆ ನೀವು ಒದಗಿಸಿದ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಸಹಾಯವಾಗುತ್ತದೆ.

ಉತ್ತರ: ಗಣತಿಕಾರನು ನಿಮಗೆ ಗಣತಿಯ ದಾಖಲೆಯನ್ನು ನೀಡಿರಬೇಕು, ಅದು ನಿಮ್ಮ ಸ್ವೀಕೃತಿ ಪತ್ರವಾಗಿರುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ಖಾತರಿ ಮಾಡಿಕೊಳ್ಳಲು ಸಂಬಂಧಪಟ್ಟ ಇ.ಆರ್.ಓ ಕಚೇರಿಯಲ್ಲಿ ಲಭ್ಯವಿರುವ ಕರಡು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ.

ಉತ್ತರ: ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ಎಫ್.ಐ.ಆರ್. ಪ್ರತಿಯನ್ನು ನೀವು ಸಲ್ಲಿಸಬಹುದು. 25 ರೂ. ಪಾವತಿ ಮಾಡಿದ ಬಳಿಕ ನಿಮಗೆ ಹೊಸ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಗುರುತಿನ ಚೀಟಿಗಳನ್ನು ನೀಡುವ ದಿನಾಂಕಗಳನ್ನು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ.

×
ABOUT DULT ORGANISATIONAL STRUCTURE PROJECTS