Back
ಆಗಾಗ ಕೇಳಲಾಗಿರುವ ಪ್ರಶ್ನೆಗಳು (ಎಫ್ಎಕ್ಯೂ)- ಚುನಾವಣಾ ಸಂಬಂಧ ಮಾಹಿತಿಗಳು

ಉತ್ತರ: ನಿರ್ವಚನಾಧಿಕಾರಿ

 

1951ರ ಜನಪ್ರತಿನಿಧಿ ಕಾಯ್ದೆ ಸೆ.64ರ ಅನುಸಾರ ಆ ಕ್ಷೇತ್ರದ ನಿರ್ವಚನಾಧಿಕಾರಿಯ ಮೇಲ್ವಿಚಾರಣೆ/ನಿರ್ದೇಶನದ ಅಡಿಯಲ್ಲಿ ಮತಗಳ ಎಣಿಕೆಯನ್ನು ಮಾಡಲಾಗುತ್ತದೆ. ಮತಗಳ ಎಣಿಕೆ ಪೂರ್ಣಗೊಂಡಾಗ 1951ರ ಜನಪ್ರತಿನಿಧಿ ಕಾಯ್ದೆಯ ಸೆ. 66ರ ಅಡಿಯಲ್ಲಿ ಒದಗಿಸಲಾಗಿರುವ ಅವಕಾಶಗಳ ಪ್ರಕಾರ ನಿರ್ವಚನಾಧಿಕಾರಿಯು ಫಲಿತಾಂಶವನ್ನು ಘೋಷಿಸುತ್ತಾರೆ.

ಉತ್ತರ: ಭಾರತದ ಚುನಾವಣಾ ಆಯೋಗ (ಇಸಿಐ)

 

1951ರ ಜನಪ್ರತಿನಿಧಿ ಕಾಯ್ದೆಯ ಸೆ.73ರ ಅನುಸಾರ ಎಲ್ಲ ಲೋಕಸಭಾ ಕ್ಷೇತ್ರಗಳ ಫಲಿತಾಂಶಗಳನ್ನು ಪ್ರಕಟಿಸಿದ ಬಳಿಕ ಚುನಾವಣಾ ಆಯೋಗವು ಚುನಾಯಿತ ಸದಸ್ಯರ ಹೆಸರುಗಳನ್ನು ಅಧಿಕೃತ ಗಜೆಟ್ ನಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಹೊಸ ಲೋಕಸಭೆಯನ್ನು ರಚನೆ ಮಾಡುತ್ತದೆ.

ಉತ್ತರ: ರಾಜ್ಯ ಚುನಾವಣಾ ಆಯೋಗ (ಎಸ್.ಸಿ.ಸಿಗಳು)

 

ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ಸಂವಿಧಾನದ (ಎಪ್ಪತ್ತಮೂರು ಮತ್ತು ಎಪ್ಪತ್ತನಾಲ್ಕು) ತಿದ್ದುಪಡಿಗಳ ಕಾಯ್ದೆ-1992ರ ಅಡಿಯಲ್ಲಿ ರಚಿಸಲಾಗಿರುವ ರಾಜ್ಯ ಚುನಾವಣಾ ಆಯೋಗಗಳು ನಗರ ಪಾಲಿಕೆಗಳು, ನಗರಸಭೆಗಳು, ಜಿಲ್ಲಾ ಪರಿಷತ್ ಗಳು, ಜಿಲ್ಲಾ ಪಂಚಾಯತ್ ಗಳು, ಪಂಚಾಯತ್ ಸಮಿತಿಗಳು, ಗ್ರಾಮ ಪಂಚಾಯತ್ ಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುವ ಅಧಿಕಾರವನ್ನು ಹೊಂದಿವೆ. ಅವು ಭಾರತದ ಚುನಾವಣಾ ಆಯೋಗದ ಸ್ವತಂತ್ರ ಸಂಸ್ಥೆಗಳಾಗಿವೆ.

 

ಉತ್ತರ: ಮುಖ್ಯ ಚುನಾವಣಾ ಅಧಿಕಾರಿ (ಸಿ.ಇ.ಓಗಳು)

1951ರ ಜನಪ್ರತಿನಿಧಿ ಕಾಯ್ದೆಯ 20ನೇ ಸೆಕ್ಸನ್ ನೊಂದಿಗೆ ಓದಿಕೊಳ್ಳುವ 1950ರ ಜನಪ್ರತಿನಿಧಿ ಕಾಯ್ದೆಯ 13ಎ ಸೆಕ್ಸನ್ ಪ್ರಕಾರ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಚುನಾವಣಾಧಿಕಾರಿಯು, ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಚುನಾವಣಾ ಕಾರ್ಯದ ಮೇಲ್ವಿಚಾರಣೆ ನಡೆಸುವ ಅಧಿಕಾರವನ್ನು ಹೊಂದಿರುತ್ತಾರೆ.

 

ಉತ್ತರ: ಭಾರತದ ಚುನಾವಣಾ ಆಯೋಗ (ಇಸಿಐ)

 

ಸಂಬಂಧಪಟ್ಟ ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶದ ಆಡಳಿತದ ಜೊತೆ ಸಮಾಲೋಚನೆ ನಡೆಸಿದ ಬಳಿಕ ಭಾರತದ ಚುನಾವಣಾ ಆಯೋಗವು ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರದ ಅಧಿಕಾರಿಯೊಬ್ಬರನ್ನು ನೇಮಕ ಮಾಡುತ್ತದೆ ಅಥವಾ ನಿಯೋಜನೆ ಮಾಡುತ್ತದೆ.

ಉತ್ತರ: ಭಾರತದ ಚುನಾವಣಾ ಆಯೋಗವು ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆಯನ್ನು ನಡೆಸಿ ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರನ್ನು ಜಿಲ್ಲಾ ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಅಥವಾ ನಿಯೋಜನೆ ಮಾಡುತ್ತದೆ.

 

ಉತ್ತರ: ನಿರ್ವಚನಾಧಿಕಾರಿ (ಆರ್.ಓ).

1951ರ ಜನಪ್ರತಿನಿಧಿ ಕಾಯ್ದೆಯ 21ನೇ ಸೆಕ್ಸನ್ ಪ್ರಕಾರ ಸಂಬಂಧಿಸಿದ ಲೋಕಸಭಾ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗಳನ್ನು ನಡೆಸುವುದು ಆಯಾ ಲೋಕಸಭಾ ಅಥವಾ ಚುನಾವಣಾ ಕ್ಷೇತ್ರದ ನಿರ್ವಚನಾಧಿಕಾರಿಯ ಜವಾಬ್ದಾರಿಯಾಗಿರುತ್ತದೆ.

 

 

ಉತ್ತರ: ಭಾರತದ ಚುನಾವಣಾ ಆಯೋಗ (ಇಸಿಐ).

 

ಸಂಬಂಧಪಟ್ಟ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶದ ಆಡಳಿತದ ಜೊತೆ ಸಮಾಲೋಚನೆ ನಡೆಸಿದ ಬಳಿಕ ಭಾರತದ ಚುನಾವಣಾ ಆಯೋಗವು ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಿಗೆ ಸರ್ಕಾರದ ಒಬ್ಬರು ಅಧಿಕಾರಿಯನ್ನು ಅಥವಾ ಸ್ಥಳೀಯ ಅಧಿಕಾರಿಯನ್ನು ನಿರ್ವಚನಾಧಿಕಾರಿಯಾಗಿ ನೇಮಕ ಅಥವಾ ನಿಯೋಜನೆ ಮಾಡುತ್ತದೆ. ಇದರ ಜೊತೆಗೆ, ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಕಾರ್ಯವನ್ನು ನಿರ್ವಹಿಸುವಲ್ಲಿ ನಿರ್ವಚನಾಧಿಕಾರಿಗೆ ಸಹಾಯ ಮಾಡಲು ಪ್ರತಿ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳಿಗೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಹಾಯಕ ನಿರ್ವಚನಾಧಿಕಾರಿಗಳನ್ನು ಭಾರತ ಚುನಾವಣಾ ಆಯೋಗವು ನೇಮಕ ಮಾಡುತ್ತದೆ.

 

ಉತ್ತರ: ಚುನಾವಣಾ ನೋಂದಣಾಧಿಕಾರಿ (ಇ.ಆರ್.ಓ).

ಲೋಕಸಭೆ ಅಥವಾ ವಿಧನಾಸಭಾ ಕ್ಷೇತ್ರಕ್ಕೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಚುನಾವಣಾ ನೋಂದಣಾಧಿಕಾರಿ (ಇ.ಆರ್.ಓ) ಜವಾಬ್ದಾರಿ.

 

ಉತ್ತರ:  ಅಧ್ಯಕ್ಷಾಧಿಕಾರಿ

 

ಮತಗಟ್ಟೆಯಲ್ಲಿ ಅಧ್ಯಕ್ಷಾಧಿಕಾರಿಯು ಚುನಾವಣಾ ಅಧಿಕಾರಿಯ ಸಹಾಯದೊಂದಿಗೆ ಮತದಾನದ ಪ್ರಕ್ರಿಯೆಯನ್ನು ನಡೆಸುತ್ತಾನೆ.

 

ಉತ್ತರ: 1950ರ ಜನಪ್ರತಿನಿಧಿ ಕಾಯ್ದೆಯ 13ಬಿ ಸೆಕ್ಸನ್ ಅಡಿಯಲ್ಲಿ ಭಾರತದ ಚುನಾವಣಾ ಆಯೋಗವು ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಸರ್ಕಾರದ ಅಧಿಕಾರಿಯನ್ನು ಅಥವಾ ಸ್ಥಳೀಯ ಅಧಿಕಾರಿಯನ್ನು ಚುನಾವಣಾ ನೋಂದಣಾಧಿಕಾರಿಯಾಗಿ ನೇಮಕ ಮಾಡುತ್ತದೆ.  ಇದರ ಜೊತೆಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ/ಪರಿಷ್ಕರಿಸುವ ಕಾರ್ಯದಲ್ಲಿ ಚುನಾವಣಾ ನೋಂದಣಾಧಿಕಾರಿಗೆ ಸಹಕರಿಸಲು ಭಾರತದ ಚುನಾವಣಾ ಆಯೋಗವು ಒಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಸಹಾಯಕ ಚುನಾವಣಾ ನೋಂದಣಾಧಿಕಾರಿಯನ್ನು ನೇಮಕ ಮಾಡುತ್ತದೆ.

 

ಉತ್ತರ: ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಓ).

ಉತ್ತರ: 1951ರ ಜನಪ್ರತಿನಿಧಿ ಕಾಯ್ದೆಯ 26ನೇ ಸೆಕ್ಸನ್ ಅಡಿಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯು ಅಧ್ಯಕ್ಷಾಧಿಕಾರಿ ಮತ್ತು ಮತಗಟ್ಟೆ ಅಧಿಕಾರಿಯನ್ನು ನೇಮಕ ಮಾಡುತ್ತಾರೆ. ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಇಂತಹ ನೇಮಕಾತಿಗಳನ್ನು ನಿರ್ವಚನಾಧಿಕಾರಿಗಳು ಮಾಡುತ್ತಾರೆ.

 ಉತ್ತರ: ಭಾರತದ ಚುನಾವಣಾ ಆಯೋಗ (ಇಸಿಐ)

ಉತ್ತರ: 1951ರ ಜನಪ್ರತಿನಿಧಿ ಕಾಯ್ದೆಯ 20ನೇ ಸೆಕ್ಸನ್ ಅಡಿಯಲ್ಲಿ, ಭಾರತದ ಚುನಾವಣಾ ಆಯೋಗವು ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಸರ್ಕಾರದ ಅಧಿಕಾರಿಗಳನ್ನು ವೀಕ್ಷಕರಾಗಿ (ಸಾಮಾನ್ಯ ವೀಕ್ಷಕರು ಮತ್ತು ಚುನಾವಣಾ ವೆಚ್ಚದ ವೀಕ್ಷಕರು) ನೇಮಕ ಮಾಡುತ್ತದೆ. ಆಯೋಗವು ಅವರಿಗೆ ವಹಿಸಿರುವಂತಹ ಕಾರ್ಯಗಳನ್ನು ಅವರು ನಿರ್ವಹಿಸುತ್ತಾರೆ. ಇದಕ್ಕೂ ಮೊದಲು ಆಯೋಗದ ಪೂರ್ಣಾಧಿಕಾರದ ಅಡಿಯಲ್ಲಿ ವೀಕ್ಷಕರನ್ನು ನೇಮಕ ಮಾಡಲಾಗುತ್ತಿತ್ತು. ಆದರೆ, 1996ರಲ್ಲಿ 1951ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಗಳನ್ನು ತಂದ ಬಳಿಕ ಇವುಗಳನ್ನು ಶಾಸನಾತ್ಮಕ ನೇಮಕಾತಿಗಳನ್ನಾಗಿ ಮಾಡಲಾಗಿದೆ. ಅವರು ಆಯೋಗಕ್ಕೇ ನೇರವಾಗಿ ವರದಿ ಮಾಡಿಕೊಳ್ಳುತ್ತಾರೆ.

×
ABOUT DULT ORGANISATIONAL STRUCTURE PROJECTS