Back
ಸಾಮಾನ್ಯ ಪ್ರಶ್ನೋತ್ತರಗಳು- ಮತದಾರರ ಪಟ್ಟಿ ಪರಿಷ್ಕರಣೆ-2022

ಉತ್ತರ: ಭಾರತವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಮತದಾನದ ಹಕ್ಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅರ್ಹ ಪ್ರಜೆಗಳು ತಮ್ಮ ಹಕ್ಕನ್ನು ಚಲಾಯಿಸುವುದು ಪ್ರತಿಯೊಂದು ಪ್ರಜಾಪ್ರಭುತ್ವದ ಹೃದಯದಲ್ಲಿಯೇ ಇದೆ. ನಾವು, ಈ ರಾಷ್ಟ್ರದ ಜನರು, ತಮ್ಮ ಮತಚಲಾಯಿಸುವ ಹಕ್ಕಿನ ಮೂಲಕ ಸರ್ಕಾರವನ್ನು ನಡೆಸುವಂತಹ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ದೇಶದ ವಿಧಿಯನ್ನು ಬದಲಿಸುವ ಅಂತಿಮ ಅಧಿಕಾರವನ್ನು ಹೊಂದಿರುತ್ತೇವೆ ಮತ್ತು ಪ್ರಗತಿ, ಅಭಿವೃದ್ಧಿ ಹಾಗೂ ಸರ್ವ ಜನರ ಲಾಭದ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ.                                                                

ಉತ್ತರ: ಯಾವ ವರ್ಷದಲ್ಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆಯೋ ಆ ವರ್ಷದ ಜನವರಿ ಒಂದರಂದು 18 ವರ್ಷ ವಯಸ್ಸನ್ನು ತುಂಬಿದ ಭಾರತದ ಎಲ್ಲ ಪ್ರಜೆಗಳೂ ತಾನು ಈಗಾಗಲೇ ವಾಸಿಸುತ್ತಿರುವ ಕ್ಷೇತ್ರದಲ್ಲಿ ಮತದಾರನಾಗಿ ನೋಂದಣಿ ಹೊಂದಲು ಅರ್ಹತೆಯನ್ನು ಪಡೆದಿರುತ್ತಾನೆ/ಳೆ. ಅಸ್ವಸ್ಥ ಮನಸ್ಸಿನ ವ್ಯಕ್ತಿಗಳು ಅಥವಾ ಸಂಬಂಧಪಟ್ಟ ಕೋರ್ಟು ಹಾಗೆಂದು ಘೋಷಣೆ ಮಾಡಿದ ವ್ಯಕ್ತಿಯು ಅಥವಾ ‘ಭ್ರಷ್ಠ ಕೆಲಸ’ಗಳಿಗಾಗಿ ಅಥವಾ ಚುನಾವಣೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಅನರ್ಹರಾದವರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅರ್ಹತೆಯನ್ನು ಹೊಂದಿರುವುದಿಲ್ಲ.

ಉತ್ತರ: ಒಂದು ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಲು ಅರ್ಹತೆಯನ್ನು ಪಡೆದ ಅರ್ಹ ನಾಗರಿಕರ ಪಟ್ಟಿಯನ್ನು ಮತದಾರರ ಪಟ್ಟಿ ಎಂದು ಕರೆಯುತ್ತೇವೆ. ಮತದಾರರ ಪಟ್ಟಿಯನ್ನು ವಿಧಾನ ಸಭಾ ಕ್ಷೇತ್ರವಾರು ಸಿದ್ಧಪಡಿಸಲಾಗುತ್ತದೆ. ಯಾವುದೇ ಒಂದು ವಿಧಾನ ಸಭಾ ಕ್ಷೇತ್ರಕ್ಕೆ ಮತದಾರರ ಪಟ್ಟಿಯನ್ನು ಮತಗಟ್ಟೆಗಳಿಗೆ ತಕ್ಕಂತೆ ಭಾಗಗಳಾಗಿ ವಿಂಗಡನೆ ಮಾಡಲಾಗುತ್ತದೆ.

 

ಉತ್ತರ: ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ನಮೂನೆ 6ರನ್ನು ಭರ್ತಿ ಮಾಡಿ ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿಗೆ ಸಲ್ಲಿಸಬೇಕು.

ಉತ್ತರ: ಕರಡು ಮತದಾರರ ಪಟ್ಟಿಯ ಕಾಗದ ರೂಪದ ಪ್ರತಿಗಳು ಈ ಕೆಳಗಿನ ಕಚೇರಿಗಳಲ್ಲಿ ಲಭ್ಯ:

  1. ವಾರ್ಡ್ ಕಚೇರಿಗಳು.,
  2. ಮತದಾರ ಸೌಲಭ್ಯ ಕೇಂದ್ರಗಳು,
  3. ಜಿಲ್ಲಾಧಿಕಾರಿ/ವಿಭಾಗಾಧಿಕಾರಿ/ತಹಸೀಲ್ದಾರ್/ಬಿಬಿಎಂಪಿ ಆರ್.ಓ. ಕಚೇರಿಗಳು ಮತ್ತು
  4. ಮತಗಟ್ಟೆ ಅಧಿಕಾರಿಗಳು (BLO's)
  5. ಸಾಫ್ಟ್ ಪ್ರತಿಯು ಸಿಇಓ ವೆಬ್-ಸೈಟ್ ನಲ್ಲಿ ಕೂಡ ಲಭ್ಯವಿರುತ್ತದೆ.

ಉತ್ತರ: ಸಿಇಓ ವೆಬ್-ಸೈಟ್ ನಲ್ಲಿ ಈ ಕೆಳಗಿನ ಸಂಗತಿಗಳನ್ನು ನೀವು ಮಾಡಬಹುದು:

  1. ನಿಮ್ಮ ಎಪಿಕ್ ಸಂಖ್ಯೆ ಮತ್ತು ನಿಮ್ಮ ಹೆಸರು ಮತ್ತು ಸಂಬಂಧಿಯ ಹೆಸರನ್ನು ಬಳಸಿಕೊಂಡು ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಹುಡುಕಬಹುದು.
  2. ವೆಬ್-ಸೈಟ್ ನಲ್ಲಿ ನಿಮ್ಮ ಸ್ವೀಕೃತಿ ಸಂಖ್ಯೆಯನ್ನು ನೀಡುವ ಮೂಲಕ ನಿಮ್ಮ ಅರ್ಜಿಯ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.
  3. ನಿಮ್ಮ ವಿಧಾನ ಸಭಾ ಕ್ಷೇತ್ರವನ್ನು ಹುಡುಕಲು ಜಿಐಎಸ್ ಆಧಾರಿತ ನಕ್ಷೆಯನ್ನು ಬಳಸಿಕೊಳ್ಳಬಹುದು.
  4. ನಿಮ್ಮ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಸೌಲಭ್ಯ ಕೇಂದ್ರಗಳ ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಪಡೆಯಬಹುದು.

ಉತ್ತರ: ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿಯೂ ಕೂಡ ಆಯಾ ಕ್ಷೇತ್ರದ ಮತದಾರರ ಸಮಸ್ಯೆಗಳನ್ನು ಪರಿಹರಿಸಲು ನಾವು ವಿಎಫ್.ಸಿ ಕೇಂದ್ರವನ್ನು ಸ್ಥಾಪನೆ ಮಾಡಿದ್ದೇವೆ. ಮತದಾರ ಸೌಲಭ್ಯ ಕೇಂದ್ರಗಳು ನಾಗರಿಕ ಸ್ನೇಹಿ ಕೇಂದ್ರಗಳಾಗಿದ್ದು ಇಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಷಯಗಳು ಮತ್ತು ಎಪಿಕ್ ಕಾರ್ಡ್ ಗಳಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ; 1) ಮತದಾರರ ಪಟ್ಟಿಗೆ ಸಂಬಂಧಿಸಿದ ವಿಷಯಗಳೆಂದರೆ ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು, ಮಾರ್ಪಾಡುಗಳನ್ನು ಮಾಡುವುದು ಮತ್ತು ವರ್ಗಾವಣೆ ಮಾಡುವುದು. 2) ಅರ್ಹ ಮತದಾರರಿಗೆ ಎಪಿಕ್ ನಂಬರ್ ಗಳನ್ನು ನೀಡಲಾಗುತ್ತದೆ. ಮತದಾರ ಸೌಲಭ್ಯ ಕೇಂದ್ರಗಳು ಪರಿಷ್ಕರಣಾ ಅವಧಿಯಲ್ಲಿ ಶನಿವಾರ ಮತ್ತು ಭಾನುವಾರಗಳಂದು ಕಾರ್ಯನಿರ್ವಹಿಸುತ್ತವೆ.

ಉತ್ತರ:

ಅರ್ಜಿ ನಮೂನೆ-6: ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು

ಅರ್ಜಿ ನಮೂನೆ-7: ಪಟ್ಟಿಯಿಂದ ಹೆಸರನ್ನು ಕಿತ್ತುಹಾಕಲು ಅಥವಾ ಹೆಸರುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು.

ನಮೂನೆ-8: ಪಟ್ಟಿಯಲ್ಲಿನ ಹೆಸರು, ಸಂಬಂಧಿಕರ ಹೆಸರು, ವಿಳಾಸ ಇತ್ಯಾದಿ ವಿವರಗಳಿಗೆ ತಿದ್ದುಪಡಿಗಳನ್ನು ಮಾಡಲು.

ಅರ್ಜಿ ನಮೂನೆ-8ಎ: ಒಂದೇ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿನ ಹೆಸರನ್ನು ಇನ್ನೊಂದು ಭಾಗಕ್ಕೆ ಸ್ಥಳಾಂತರ ಮಾಡಲು.

ಅರ್ಜಿ ನಮೂನೆ-6ಎ: ಮತದಾರರ ಪಟ್ಟಿಯಲ್ಲಿ ಸಾಗರೋತ್ತರ ಮತದಾರನ ಹೆಸರನ್ನು ಸೇರ್ಪಡೆಮಾಡಲು.

ಉತ್ತರ: ಹೌದು. ನೀವು ನಿಮ್ಮ ಅರ್ಜಿಯನ್ನು ಆನ್-ಲೈನ್ ಮೂಲಕ ಸಲ್ಲಿಕೆ ಮಾಡಬಹುದು. ದಯವಿಟ್ಟು https://www.nvsp.in/ ಗೆ ಭೇಟಿ ನೀಡಿ ಸಲ್ಲಿಕೆ ಮಾಡಿ.

 

ಉತ್ತರ: ಹೌದು. ಮತದಾರರ ಪಟ್ಟಿಯಲ್ಲಿನ ನಿಮ್ಮ ನೋಂದಣಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ನಿಮ್ಮ ಎಪಿಕ್ ಸಂಖ್ಯೆಯನ್ನು 9243355223 ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. ಉದಾ: KAEPIC ಬರೆದ ಬಳಿಕ ಜಾಗ ಬಿಟ್ಟು ನಿಮ್ಮ ಎಪಿಕ್ ಸಂಖ್ಯೆಯನ್ನು ಬರೆಯಬೇಕು. “KAEPIC wzu1234567”

ಉತ್ತರ: ನಿಮ್ಮ ವಾರ್ಡ್ ಕಚೇರಿಗಳಲ್ಲಿ ನಿಮ್ಮ ಮತದಾರರ ಪಟ್ಟಿಗಳ ಪ್ರತಿಗಳು ಮತ್ತು ಆಫ್-ಲೈನ್ ನಲ್ಲಿ ಹುಡುಕಾಟ ನಡೆಸುವ ಸೌಲಭ್ಯ ಲಭ್ಯವಿರುತ್ತದೆ. ಅರ್ಜಿ ನಮೂನೆಗಳನ್ನು ನೀಡಲು ಮತ್ತು ಪಡೆಯಲು ವಾರ್ಡ್ ಕಚೇರಿಗಳು ಸ್ಥಳೀಯ ಕೇಂದ್ರಗಳಾಗಿರುತ್ತವೆ. ನಾಗರಿಕರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲು ಪೆಟ್ಟಿಗೆಗಳನ್ನೂ ಬಳಸಲಾಗುತ್ತದೆ.

ಉತ್ತರ: ಮತದಾರರ ಪಟ್ಟಿಗಳ ನಿರ್ವಹಣೆಯಲ್ಲಿ ನಾಗರಿಕ ಸೊಸೈಟಿಗಳು/ ಆರ್.ಡಬ್ಲ್ಯು.ಎಗಳು/ ಬೂತ್ ಮಟ್ಟದ ಸ್ವಯಂಸೇವಕರ ಪಾತ್ರ ಬಹಳ ಮುಖ್ಯವಾದುದು. ಮತದಾರರ ಪಟ್ಟಿಯ ನಿರ್ವಹಣೆಗೆ ನಮ್ಮ ಮತಗಟ್ಟೆ ಹಂತದ ಸ್ವಯಂಸೇವಕರಾಗಿ ಕೆಲಸ ಮಾಡಲು ಆರ್.ಡಬ್ಲ್ಯುಎ/ಸಿಎಸ್ಓಗಳ ಜೊತೆ ಪಾಲುದಾರರಾಗಲು ನಾವು ಸಿದ್ಧರಿದ್ದೇವೆ. ತಮ್ಮ ಪ್ರದೇಶದ ಮತದಾರರ ಪಟ್ಟಿ ಕರಾರುವಕ್ಕಾಗಿರಲು ಆಸಕ್ತ ಆರ್.ಡಬ್ಲ್ಯು.ಎಗಳು ಚುನಾವಣಾ ಯಂತ್ರದೊಂದಿಗೆ ಭಾಗವಹಿಸಬಹುದಾಗಿದೆ

ಉತ್ತರ: ಇಲ್ಲ. 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಸನ್ 17 ಮತ್ತು 18ರ ಅಡಿಯಲ್ಲಿ ನಿರ್ಬಂಧಿಸಿರುವಂತೆ ಒಬ್ಬ ಮತದಾರನು ಒಂದೇ ಕ್ಷೇತ್ರದಲ್ಲಿ ಅಥವಾ ಒಂದಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಮತದಾರನಾಗಿ ನೋಂದಣಿ ಮಾಡಿಕೊಳ್ಳುವಂತಿಲ್ಲ.

ಉತ್ತರ: ಒಂದು ವೇಳೆ ಅದೇ ಕ್ಷೇತ್ರದಲ್ಲಿ ನಿಮ್ಮ ಮನೆ ಇದ್ದರೆ 8ಎ ಅರ್ಜಿ ನಮೂನೆಯನ್ನು ತುಂಬಿ. ಇಲ್ಲವಾದರೆ ಅರ್ಜಿ ನಮೂನೆ 6ನ್ನು ಭರ್ತಿ ಮಾಡಿ ಅದನ್ನು ನಿಮ್ಮ ಹೊಸ ನಿವಾಸ ಸ್ಥಾನವಿರುವ ಪ್ರದೇಶದ ಇಆರ್.ಓ (ಎಸ್.ಡಿ.ಎಂ) ಅಥವಾ ಎಇಆರ್.ಓ (ಎಫ್ಎಸ್ಓ)ಗೆ ಸಲ್ಲಿಸಿ.

ಉತ್ತರ: ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ನಿಮ್ಮ ಶಾಸನಾತ್ಮಕ ಹಕ್ಕು. ನೀವು ಆ ಪ್ರದೇಶದ ಸಾಮಾನ್ಯ ನಿವಾಸಿಯಾಗಿದ್ದರೆ ನೋಂದಣಿ ಮಾಡಿಸಿಕೊಳ್ಳುವ ಅರ್ಹತೆಯನ್ನು ಪಡೆದಿರುತ್ತೀರಿ. ನಿಮ್ಮ ಪ್ರದೇಶದ ಇ.ಆರ್.ಓ/ಎಇಆರ್/ವಾರ್ಡ್ ಕಚೇರಿಯ ಮತದಾರರ ಪಟ್ಟಿಯಲ್ಲಿ ದಯವಿಟ್ಟು ಒಮ್ಮೆ ಪರಿಶೀಲನೆ ನಡೆಸಿ. ಒಂದು ವೇಳೆ ನಿಮ್ಮ ಹೆಸರು ಇಲ್ಲದೇ ಹೋದರೆ ಅರ್ಜಿ ನಮೂನೆ 6ನ್ನು ಭರ್ತಿ ಮಾಡಿ ಅದನ್ನು ಇಓಆರ್ ನಲ್ಲಿ ನೀಡಿ.

ಉತ್ತರ: ಫಾಸ್-ಪೋರ್ಟ್, ಹತ್ತನೇ ತರಗತಿಯ ಸರ್ಟಿಫಿಕೇಟ್, ಜನನ ದಿನಾಂಕದ ಪ್ರಮಾಣಪತ್ರ ಇತ್ಯಾದಿ ಸೂಕ್ತವಾದ ದಾಖಲೆಗಳನ್ನು ನೀಡುವ ಮೂಲಕ ನಿಮ್ಮ ಜನನ ದಿನಾಂಕದ ಪುರಾವೆಯನ್ನು ನೀಡಬಹುದು

ಉತ್ತರ. ಫಾರ್ಮ್‌ನ ಸ್ವೀಕೃತಿಗಾಗಿ BLO/ಅಧಿಕಾರಿಯು ನಿಮಗೆ ಸ್ವೀಕೃತಿಯನ್ನು ಹಸ್ತಾಂತರಿಸಿರಬೇಕು. ರೋಲ್‌ನಲ್ಲಿ ನಿಮ್ಮ ಹೆಸರನ್ನು ನೀವು ಪರಿಶೀಲಿಸಬಹುದು, ಅದನ್ನು ಪ್ರಕಟಿಸಲಾಗುವುದು ಮತ್ತು ರೋಲ್‌ನಲ್ಲಿ ನಿಮ್ಮ ಹೆಸರು ಅಸ್ತಿತ್ವದಲ್ಲಿದೆ ಎಂದು ಖಚಿತಪಡಿಸಲು ಸಂಬಂಧಿಸಿದ ಇಆರ್‌ಒ ಕಚೇರಿಯಲ್ಲಿ ಲಭ್ಯವಿರುತ್ತದೆ. ಸಿಇಒ ಅವರ ವೆಬ್‌ಸೈಟ್‌ನಲ್ಲಿ ಈ ಸ್ವೀಕೃತಿ ಸಂಖ್ಯೆಯೊಂದಿಗೆ ನೀವು ಅರ್ಜಿಯ ಸ್ಥಿತಿಯನ್ನು ಸಹ ಪರಿಶೀಲಿಸಬಹುದು.

ಉತ್ತರ. ಹೌದು, 18 ವರ್ಷಗಳನ್ನು ತಲುಪುವ ಮತ್ತು ಸಾಮಾನ್ಯ ನಿವಾಸಿಯಾಗಿರುವ ಕೆಳಗಿನ ವರ್ಗದ ಜನರನ್ನು ಹೊರತುಪಡಿಸಿ, ಮತದಾನದ ಹಕ್ಕುಗಳನ್ನು ನಿರಾಕರಿಸಲಾಗಿದೆ.

ಎ) ಕೆಲವು ಪ್ರಕರಣಗಳ ಕ್ರಿಮಿನಲ್ ಅಪರಾಧಿಗಳು.
ಬಿ) ಚುನಾವಣಾ ಅಪರಾಧಕ್ಕೆ ಶಿಕ್ಷೆಗೊಳಗಾದ ವ್ಯಕ್ತಿಗಳು 
ಸಿ) ಅಸ್ವಸ್ಥ ಮನಸ್ಸಿನ ವ್ಯಕ್ತಿಗಳು.
ಉತ್ತರ. ಭಾರತದ ಚುನಾವಣಾ ಆಯೋಗವು ಮತದಾನದ ಸಮಯದಲ್ಲಿ ಮತದಾರರ ಗುರುತನ್ನು ಕಡ್ಡಾಯಗೊಳಿಸಿದೆ. ಮತದಾರರು ಆಯೋಗವು ನೀಡಿದ ಮತದಾರರ ಫೋಟೋ ಗುರುತಿನ ಚೀಟಿ (EPIC) ಅಥವಾ ಆಯೋಗವು ಸೂಚಿಸಿದಂತೆ ಯಾವುದೇ ಇತರ ಸಾಕ್ಷ್ಯಚಿತ್ರ ಪುರಾವೆಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು.
ಉತ್ತರ. ನಿಮಗೆ ನೀಡಲಾದ EPIC ಅನ್ನು ಹೊಂದಿರುವುದು ನಿಮ್ಮ ಮತವನ್ನು ಖಾತರಿಪಡಿಸುವುದಿಲ್ಲ ಎಂಬುದನ್ನು ನೀವು ಗಮನಿಸಬೇಕು, ಏಕೆಂದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದು ಕಡ್ಡಾಯವಾಗಿದೆ.
ಉತ್ತರ ಪಡಿತರ ಚೀಟಿ ಹೊಂದಿರುವುದು ಕಡ್ಡಾಯವಲ್ಲ; ನೀವು ಪಾಸ್‌ಪೋರ್ಟ್, ಬ್ಯಾಂಕ್/ಪಾಸ್ ಪುಸ್ತಕ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ಅಥವಾ ಯಾವುದೇ ಸರ್ಕಾರದ ನಿವಾಸದ ಯಾವುದೇ ಪುರಾವೆಯನ್ನು ತೋರಿಸಬಹುದು

ಉತ್ತರ. ನಿಮ್ಮ EPIC ಕಾರ್ಡ್ ಅನ್ನು ನಿಮ್ಮ ಕ್ಷೇತ್ರದ ಮತದಾರರ ಅನುಕೂಲ ಕೇಂದ್ರದಲ್ಲಿ ಠೇವಣಿ ಮಾಡುವ ಮೂಲಕ ಸರಿಪಡಿಸಬಹುದು.

ಉತ್ತರ. ನಿಮ್ಮ ಮತದಾರರ ನೋಂದಣಿ ಕೇಂದ್ರಕ್ಕೆ ನಕಲಿ ಕಾರ್ಡ್‌ಗಾಗಿ ವಿನಂತಿಯೊಂದಿಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರತಿಯನ್ನು ನೀವು ಲಗತ್ತಿಸಬಹುದು. ರೂ.25 ನಿಗದಿತ ಶುಲ್ಕವನ್ನು ಪಾವತಿಸಿದ ನಂತರ ನೀವು ಹೊಸ EPIC ಕಾರ್ಡ್ ಅನ್ನು ಪಡೆಯುತ್ತೀರಿ.
ಉತ್ತರ. ದಯವಿಟ್ಟು ನಿಮ್ಮ ಅರ್ಜಿಯ ಸ್ಥಿತಿಯನ್ನು ಸಂಬಂಧಿತ ಮತದಾರರ ಕೇಂದ್ರದಲ್ಲಿ ಪರಿಶೀಲಿಸಿ ಅಥವಾ ಸಂಬಂಧಪಟ್ಟ AERO ಅನ್ನು ಸಂಪರ್ಕಿಸಿ.
ಉತ್ತರ. ದಯವಿಟ್ಟು ಸಂಬಂಧಿತ ಮತದಾರರ ಸೌಲಭ್ಯ ಕೇಂದ್ರ ಅಥವಾ AERO ಅನ್ನು ಸಂಪರ್ಕಿಸಿ. ನೀವು ECI ವೆಬ್‌ಸೈಟ್‌ನಲ್ಲಿ ನಿಮ್ಮ ದೂರನ್ನು ನೋಂದಾಯಿಸಬಹುದು ಅಥವಾ ದೂರವಾಣಿ ಸಂಖ್ಯೆ.1950 ಅನ್ನು ಬಳಸಬಹುದು.

 

×
ABOUT DULT ORGANISATIONAL STRUCTURE PROJECTS